ನವದೆಹಲಿ, ಸೆ.22 (DaijiworldNews/PY): ಪೈಲಟ್ ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿಯವರನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಲು ಭಾರತ ಸರ್ಕಾರ ತೀರ್ಮಾನಿಸಿದೆ.
ಸೆಪ್ಟೆಂಬರ್ 30ರಂದು ವಾಯುಪಡೆಯ ಹಾಲಿ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಆರ್.ಕೆ.ಎಸ್ ಬಧೌರಿಯಾ ನಿವೃತ್ತರಾಗಲಿದ್ದು, ಬಳಿಕ ವಿ.ಆರ್. ಚೌಧರಿ ಅವರು ವಾಯುಪಡೆ ಮುಖ್ಯಸ್ಥರ ಹುದ್ದೆಯನ್ನು ನಿರ್ವಹಿಸಲಿದ್ದಾರೆ.
ವಿ. ಆರ್ ಚೌಧರಿ ಅವರು ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಿಗ್- 29 ಯುದ್ಧ ವಿಮಾನದ ನಿಪುಣ ಪೈಲಟ್ ಎಂದು ಹೆಸರಾಗಿದ್ದಾರೆ.
ಭಾರತ ಸರ್ಕಾರದ ರಕ್ಷಣಾ ಇಲಾಖೆಯ ವಕ್ತಾರರು, ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರ ಪದೋನ್ನತಿಯನ್ನು ದೃಢಪಡಿಸಿದೆ.