ಮುಂಬೈ, ಸೆ.21 (DaijiworldNews/HR): ನನ್ನ ಮೇಲೆ ಅಪರಿಚಿತರು ಹಲ್ಲೆಗೆ ಯತ್ನಿಸಿದ್ದು, ಅಪಾಯದಿಂದ ಪಾರಾಗಿದ್ದೇನೆ ಎಂದು ಬಾಲಿವುಡ್ ನಟಿ ಪಾಯಲ್ ಘೋಷ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹೇಳಿಕೆ ನೀಡಿರುವ ಅವರು, "ಸೋಮವಾರ ಮೆಡಿಕಲ್ ಶಾಪ್ನಿಂದ ಔಷಧಿಗಳ ಖರೀದಿಸಿ ಕಾರು ಹತ್ತುವ ಸಮಯದಲ್ಲಿ ಅಪರಿಚಿತ ಮುಸುಕುದಾರಿಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅವರ ಕೈಯಲ್ಲಿ ಒಂದು ಬಾಟಲಿ ಇತ್ತು, ಬಹುಶಃ ಅದರಲ್ಲಿ ಆ್ಯಸಿಡ್ ಇರಬಹುದು ಎಂದುಕೊಂಡು ನಾನು ಜೋರಾಗಿ ಕೂಗಿದೆ, ಅವರಲ್ಲೊಬ್ಬ ನನ್ನ ಕಡೆ ಕಬ್ಬಿಣದ ರಾಡ್ ಎಸೆದ. ನಂತರ ಅವರು ಅಲ್ಲಿಂದ ಪರಾರಿಯಾದರು. ಆ ರಾಡ್ ನನ್ನ ಎಡಗೈಗೆ ಬಡಿಯಿತು, ಕೂಡಲೇ ನಾನು ಕಾರು ಹತ್ತಿ ಮನೆಗೆ ತೆರಳಿದೆ" ಎಂದು ಹೇಳಿದ್ದಾರೆ.
ಇನ್ನು ನನ್ನ ಎಡಗೈಗೆ ಸಣ್ಣ ಗಾಯವಾಗಿದೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿರುವೆ ಎಂದು ಪಾಯಲ್ ಹೇಳಿದ್ದಾರೆ.
ವಿಡಿಯೊದಲ್ಲಿ ಗಾಯವಾಗಿರುವ ಕೈಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.