ಬೆಂಗಳೂರು, ಸೆ.21 (DaijiworldNews/HR): ಬೆಂಗಳೂರಿನಲ ಅಪಾರ್ಟ್ಮೆಂಟ್ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಸಜೀವ ದಹನಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸಾಂಧರ್ಭಿಕ ಚಿತ್ರ
ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮನೆಯಿಂದ ಹೊರಬರಲಾಗದೇ ವ್ಯಕ್ತಿ ಬೆಂಕಿಗಾಹುತಿಯಾಗಿದ್ದಾನೆ.
ಇನ್ನು ಅಪಾರ್ಟ್ಮೆಂಟ್ನ ಒಂದು ಫ್ಲ್ಯಾಟ್ ಹೊತ್ತಿ ಉರಿದಿದ್ದು, ಅಕ್ಕಪಕ್ಕದ ನಿವಾಸಗಳಿಗೂ ಹಾನಿಯಾಗಿವೆ.
ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಅಪಾರ್ಟ್ ಮೆಂಟ್ ಜನರನ್ನು ಮನೆಯಿಂದ ಹೊರಗೆ ಕಳುಹಿಸಿ ಕಾರ್ಯಾಚರಣೆ ನಡೆಸಿದ್ದಾರೆ.