ನವದೆಹಲಿ, ಸೆ 21(DaijiworldNews/MS): ಭಾರತದಲ್ಲಿ ಹಿಂದೂ ಧರ್ಮಕ್ಕೆ ಬೆದರಿಕೆಗಳು ಎಂಬುವುದು "ಕಾಲ್ಪನಿಕ" ಎಂದು ಕೇಂದ್ರವು ಇತ್ತೀಚೆಗೆ ಮಾಹಿತಿ ಹಕ್ಕು (ಆರ್ಟಿಐ) ಪ್ರಶ್ನೆಗೆ ಪ್ರತಿಕ್ರಿಯಿಸಿದೆ.
ಹಿಂದೂ ಧರ್ಮವು ಅಪಾಯದಲ್ಲಿದೆ ಎಂಬುವುದನ್ನು ತಳ್ಳಿಹಾಕಿದ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಹಿಂದೂ ಧರ್ಮಕ್ಕೆ ಬೆದರಿಕೆ ಎಂದು ಕರೆಯಲ್ಪಡುವ ಯಾವುದೇ ದಾಖಲೆ ಅಥವಾ ಪುರಾವೆಗಳಿಲ್ಲ ಎಂದು ಹೇಳಿದೆ.
ಹಿಂದೂ ಧರ್ಮಕ್ಕೆ ಅಪಾಯ ಎಂಬ ಅಪಾದನೆಯೂ "ಕಾಲ್ಪನಿಕ" ಎಂದು ಕರೆದ ಸಚಿವಾಲಯ, ಇದನ್ನು ದೃಢಕರಿಸುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ಆಗಸ್ಟ್ 31 ರಂದು ನಾಗ್ಪುರದ ಆರ್ಟಿಐ ಕಾರ್ಯಕರ್ತ ಮೊಹ್ನಿಶ್ ಜಬಲ್ಪುರೆ ಅವರು ಸಲ್ಲಿಸಿದ "ದೇಶದಲ್ಲಿ 'ಹಿಂದೂ ಧರ್ಮಕ್ಕೆ' ಬೆದರಿಕೆಗಳು ಆರ್ಟಿಐ ಅರ್ಜಿಗೆ ಪುರಾವೆಗಳನ್ನು ಕೋರಿದ್ದು ಇದಕ್ಕೆ ಸಚಿವಾಲಯ ಉತ್ತರಿಸಿತ್ತು.
ಅವರ ಪ್ರತಿಕ್ರಿಯೆಯಲ್ಲಿ, ಸಚಿವಾಲಯದ ಆಂತರಿಕ ಭದ್ರತೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳ ಪ್ರಕಾರ,ತ ಮ್ಮ ಬಳಿ ಲಭ್ಯವಿರುವ ಅಥವಾ ಅವರ ವ್ಯಾಪ್ತಿಯಲ್ಲಿ ಬರುವ ಮಾಹಿತಿಯನ್ನು ಮಾತ್ರ ನೀಡಬಹುದು. ಕಾರ್ಯಕರ್ತ ಮೊಹ್ನಿಶ್ ಜಬಲ್ಪುರೆ ಕಾಲ್ಪನಿಕ" ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಅರ್ಜಿ ಶೂನ್ಯ ಮತ್ತು ಅನೂರ್ಜಿತ ಎಂದು ಪರಿಗಣಿಸಲಾಗಿದೆ.
"ಹಿಂದೂ ಧರ್ಮದ ಬೆದರಿಕೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯು ಕಾಲ್ಪನಿಕವಾಗಿದೆ ಮತ್ತು ಅಂತಹ ಯಾವುದೇ ಊಹೆಯನ್ನು ಬೆಂಬಲಿಸಲು ಯಾವುದೇ ದಾಖಲೆಗಳಿಲ್ಲ ಎಂದು ದಾಖಲೆಯಲ್ಲಿ ಒಪ್ಪಿಕೊಳ್ಳಲಾಗಿದೆ.