ಬೆಂಗಳೂರು, ಸೆ.21 (DaijiworldNews/HR): "ಕೊರೊನಾದಿಂದ ಮೃತಪಟ್ಟ ಬಡ ಕುಟುಂಬದವರಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ತಲಾ 1 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, "ಕೊರೊನಾದಿಂದಾಗಿ ರಾಜ್ಯದಲ್ಲಿ ಸುಮಾರು 35,000 ಜನರು ಮೃತಪಟ್ಟಿದ್ದು, ಪರಿಹಾರ ಕೋರಿ ಸರ್ಕಾರಕ್ಕೆ 7,000-8,000 ಅರ್ಜಿಗಳು ಬಂದಿದ್ದು, ಕೊರೊನಾದಿಂದ ವಯಸ್ಕ ಸದಸ್ಯರನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಗಳಿಗೆ ಅವರ ಹಿಂದಿನ ಬಿ.ಎಸ್.ಯಡಿಯೂರಪ್ಪ 1 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದರು" ಎಂದರು.
ಇನ್ನು "ಎರಡನೇ ಅಲೆಯ ಬಳಿಕ ಆರ್ಥಿಕ ಚಟುವಟಿಕೆಯು ಕ್ರಮೇಣ ಹೆಚ್ಚಳವನ್ನು ನೋಡುತ್ತಿರುವುದರಿಂದ ರಾಜ್ಯ ಸರ್ಕಾರವು ಜನರು ಮತ್ತು ವ್ಯವಹಾರಗಳಿಗೆ ಸಹಾಯ ಮಾಡಲು ಉತ್ಸುಕವಾಗಿದೆ" ಎಂದಿದ್ದಾರೆ.