ನವದೆಹಲಿ, ಸೆ. 20 (DaijiworldNews/HR): ಮುಂದಿನ ತಿಂಗಳಿನಿಂದ ಹೆಚ್ಚುವರಿ ಲಸಿಕೆಗಳ ರಫ್ತು ಮತ್ತು ದೇಣಿಗೆಯನ್ನು ಭಾರತ ಪುನರಾರಂಭಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, "ಭಾರತದಿಂದ ಹೆಚ್ಚುವರಿ ಕೊರೊನಾ ಲಸಿಕೆಯನ್ನು ಮುಂದಿನ ತಿಂಗಳಿನಿಂದ ರಪ್ತು ಮಾಡುವಂತ ಪ್ರಕ್ರಿಯೆಯನ್ನು ಪುನರಾರಂಭಿಸಲಾಗುತ್ತದೆ" ಎಂದರು.
"ಅಕ್ಟೋಬರ್ನಲ್ಲಿ 30 ಕೋಟಿ ಡೋಸ್ ಮತ್ತು ಮುಂದಿನ ಮೂರು ತಿಂಗಳಲ್ಲಿ 100 ಕೋಟಿ ಡೋಸ್ಗಳು ನಮಗೆ ಲಭ್ಯವಾಗಲಿವೆ" ಎಂದು ಹೇಳಿದ್ದಾರೆ.
ಇನ್ನು ಭಾರತದಲ್ಲಿ ಸೋಂಕು ಹೆಚ್ಚಾದಂತೆ ತನ್ನದೇ ಜನಸಂಖ್ಯೆಗೆ ಚುಚ್ಚುಮದ್ದು ನೀಡುವತ್ತ ಗಮನ ಹರಿಸಲು ಏಪ್ರಿಲ್ ನಲ್ಲಿ ಲಸಿಕೆ ರಫ್ತನ್ನು ನಿಲ್ಲಿಸಿತು.