ಮುಂಬೈ, ಸೆ. 20 (DaijiworldNews/HR): ನಟಿ ಕಂಗನಾ ರಣಾವತ್ ವಿರುದ್ಧ ಗೀತ ರಚನಾಕಾರ ಜಾವೇದ್ ಅಖ್ತರ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅಂಧೇರಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ನ್ಯಾಯಾಲಯ ಕಡ್ಡಾಯವಾಗಿ ಹಾಜರಾಗುವಂತೆ ಸಮನ್ಸ್ ನೀಡಿ, ತಪ್ಪಿದರೆ ವಾರಂಟ್ ಹೊರಡಿಸುವ ಎಚ್ಚರಿಕೆ ನೀಡಿತ್ತು. ಈ ಮೂಲಕ ಅವರಿಗೆ ಪರೋಕ್ಷವಾಗಿ ಬೆದರಿಕೆ ಹಾಕಿದಂತಾಗಿದೆ. ಇದರಿಂದಾಗಿ ಕಂಗನಾ ಅವರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಬಗ್ಗೆ ನಂಬಿಕೆಯೇ ಹೋಗಿದೆ ಎಂದು ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಹೇಳಿದ್ದಾರೆ.
ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರತಿ ದೂರು ಸಲ್ಲಿಸಿದ್ದು, ಕಂಗನಾ ಪರ ವಕೀಲರು ಈ ದೂರಿನ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಅರ್ಜಿ ಸಲ್ಲಿಸಿದರು.