ಬೆಂಗಳೂರು, ಸೆ.20 (DaijiworldNews/PY): ಪ್ರಮುಖ ಸ್ಥಳಗಳು ಸೇರಿದಂತೆ ಕಟ್ಟಡಗಳು ರಕ್ಷಣಾ ಸಂಸ್ಥೆಗಳ ಫೋಟೋ ತೆಗೆದು ವಿದೇಶಿ ಏಜೆನ್ಸಿಗಳಿಗೆ ಕಳುಹಿಸುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಾಜಸ್ಥಾಬ ಮೂಲದವನು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿಯನ್ನು ಜಿತೇಂದ್ರ ರಾಥೋಡ್ ಎಂದು ಗುರುತಿಸಲಾಗಿದ್ದು, ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
"ಸೇನಾ ಗುಪ್ತಚರ ದಳ ನೀಡಿದ ಮಾಹಿತಿಯ ಮೇರೆಗೆ ಈತನನ್ನು ಬಂಧಿಸಲಾಗಿದೆ" ಎಂದು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
"ಈತ ಪ್ರಮುಖ ಸ್ಥಳಗಳು, ರಕ್ಷಣಾ ಸಂಸ್ಥೆಗಳ ಫೋಟೋ ತೆಗೆದು ವಿದೇಶಿ ಏಜೆನ್ಸಿಗೆ ಕಳುಹಿಸುತ್ತಿದ್ದ" ಎಂದು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಅಫೀಷಿಯಲ್ ಸೀಕ್ರೆಟ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ದೇಶದ ವಿವಿಧೆಡೆಗಳಲ್ಲಿ ಕೃತ್ಯವೆಸಗಿದ್ದ ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.