ಬೆಂಗಳೂರು, ಸೆ. 20 (DaijiworldNews/HR): ಬಿಜೆಪಿಯು ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಈಗಾಗಲೇ ಬೆಲೆ ಏರಿಕೆಯಿಂದ ಜನರ ಬದುಕು ಹೈರಾಣಾಗಿದೆ, ಇದರ ನಡುವೆಯೇ ಕೇಂದ್ರ ಸರ್ಕಾರ ಮತ್ತಷ್ಟು ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಿಸಿ ಜನರ ಬದುಕನ್ನು ಮತ್ತಷ್ಟು ದುಬಾರಿಯಾಗಿಸಿದೆ" ಎಂದಿದೆ.
ಇನ್ನು "ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಸರ್ಕಾರ ಸಾಮಾನ್ಯರ ಮೇಲೆ ತೆರಿಗೆ ಬರೆ ಹಾಕುತ್ತಿದೆ. ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ" ಎಂದು ಹೇಳಿದೆ.