ಬೆಂಗಳೂರು, ಸೆ 20 (DaijiworldNews/MS): ಪೆಟ್ರೋಲ್ ಡೀಸೆಲ್ ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷಡಿಕೆ ಶಿವಕುಮಾರ್ ಸೈಕಲಿನಿಂದ ಸೌಧದ ತೆರಳಿದ್ದಾರೆ. ಅಧಿವೇಶನದಲ್ಲಿ ಇನ್ನೂ ಹಲವು ವಿಷಯಗಳು ಚರ್ಚೆಯಾಗಲಿದೆ. ಇದಕ್ಕೂ ಮುನ್ನ ಸರ್ಕಾರಕ್ಕೆ ಬೆಲೆ ಏರಿಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ನಡೆಸಿದ್ದಾರೆ.
ಕಾಂಗ್ರೆಸ್ ನ ಸೈಕಲ್ ಜಾಥಾದಿಂದಾಗಿ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಸೈಕಲ್ ಏರಿಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ದಾರಿ ಮದ್ಯೆಯೇ ತಡೆದಿದ್ದಾರೆ.
ಅಧಿವೇಶನ ಪ್ರಾರಂಭದ ದಿನ ಎತ್ತಿನಗಾಡಿಯಲ್ಲಿ ಆಗಮಿಸಿದ್ದ ಕೈ ನಾಯಕರು, ಇಂದು ಸೈಕಲ್ ಮೂಲಕ ಅಧಿವೇಶನಕ್ಕೆ ಆಗಮಿಸಿದ್ದಾರೆ.