ಸತಾರ, ಸೆ.20 (DaijiworldNews/PY): ಬಿಜೆಪಿ ಮುಖಂಡ ಕಿರೀತ್ ಸೋಮಯ್ಯ ಅವರನ್ನು ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರಡ್ ರೈಲ್ವೆ ನಿಲ್ದಾಣದಿಂದ ಇಂದು ಮುಂಜಾನೆ ಬಂಧಿಸಲಾಗಿದೆ.
ಸೋಮವಾರ ಮುಂಜಾನೆ ಸೋಮಯ್ಯ ಅವರು ಕೊಲ್ಹಾಪುರಕ್ಕೆ ಭೇಟಿ ನೀಡಬೇಕಿತ್ತು. ಕೊಲ್ಹಾಪುರಕ್ಕೆ ರೈಲಿನ ಮೂಲಕ ತೆರಳುವ ಸಂದರ್ಭ ಅವರನ್ನು ಬಂಧಿಸಲಾಗಿದೆ.
ಕಿರೀತ್ ಸೋಮಯ್ಯ ಅವರು ಕೊಲ್ಹಾಪುರ ಭೇಟಿ ಹಿನ್ನೆಲೆ ಜಿಲ್ಲಾಧಿಕಾರಿ ನಿಷೇಧ ಆದೇಶ ಹೊರಡಿಸಿದ್ದರು. ಇಂದು, ನಾಳೆ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಮುಂಬೈ ನಿವಾಸದಲ್ಲಿ ತನ್ನನ್ನು ಬಂಧಿಸಲಾಗಿದೆ ಎಂದು ಭಾನುವಾರ ಬಿಜೆಪಿ ನಾಯಕ ದೂರಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಮಹಾರಾಷ್ಟ್ರ ಸರ್ಕಾರದ ವಿರುದ್ದ ಹರಿಹಾಯ್ದರು. ಮುಂಬೈಯಿಂದ ಹೊರಗೆ ಹೋಗದಂತೆ ನಿರ್ಬಂಧಿಸುವ ಆದೇಶಗಳನ್ನು ಯಾರು ನೀಡುತ್ತಾರೆ? ಎಂದು ಕೇಳಿದ್ದಾರೆ.
ಈ ಹಿಂದೆ ಸೋಮಯ್ಯ ಅವರು, ಮಹಾರಾಷ್ಟ್ರದ ಕ್ಯಾಬಿನೆಟ್ ಮಂತ್ರಿಗಳಾದ ಚಗನ್ ಭುಜ್ಬಲ್ ಹಾಗೂ ಅನಿಲ್ ಪರಬ್ ವಿರುದ್ದ ವರ್ಗಾವಣೆ ಆರೋಪ ಮಾಡಿದ್ದರು.