ಬೆಳಗಾವಿ ಸೆ 20 (DaijiworldNews/MS): ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ತೆರೆದ ಬೋರ್ ವೆಲ್ ಗೆ ಬಿದ್ದ ಎರಡೂವರೆ ವರ್ಷದ ಮಗು ಹೊರಕ್ಕೆ ತೆಗೆಯಲು ಕಾರ್ಯಾಚರಣೆ ನಡೆಸು ಶವವಾಗಿ ಪತ್ತೆಯಾಗಿದ್ದ ಘಟನೆ ರೋಚಕ ತಿರುವು ಪಡೆದುಕೊಂಡಿದೆ.
ಪುಟ್ಟ ಕಂದಮ್ಮನನ್ನೇ ತೆರೆದ ಕೊಳವೆ ಬಾವಿಗೆ ಬಿಸಾಕಿ ಕೊನೆಗೆ , ಅಪಹರಣ , ನಾಪತ್ತೆ ಕೊಳೆವೆಬಾವಿಗೆ ಬಿದ್ದಿದೆ ಎಂದು ನಾಟಕವಾಡಿದ್ದ ತಂದೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಸಿದ್ದಪ್ಪ ಹೆಸರಿನ ಎಂಬ ಕಟುಕ ಮನಸ್ಥಿತಿಯ ತಂದೆ ಮೊದಲು ಮಗು ಅಪಹರಣವಾಗಿದೆ ಎಂದು ಹಾರೂಗೇರಿಯ ಪೋಲಿಸ್ ಠಾಣೆ ಎಂದು ದೂರು ದಾಖಲಿಸುತ್ತಾನೆ, ಹುಡುಕಾಟದ ಬಳಿಕ ಮಗು ಬೋರ್ ವೆಲ್ ಗೆ ಬಿದ್ದಿರುವುದು ಖಚಿತವಾಗಿ ಮಗು ಸುರಕ್ಷಿತವಾಗಿ ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತದೆ. 9ಮೀಟರ ಆಳದ ವ್ಯಾಪ್ತಿಯಲ್ಲಿದ್ದ ಕಂದನನ್ನು ರಕ್ಷಿಸಿ ಮೇಲೆತ್ತುವ ಪ್ರಯತ್ನದ ನಂತರವೂ ಮಗು ಹೊರತೆಗೆದಾಗ ಸಾವನ್ನಪ್ಪಿರುವುದು ಖಚಿತವಾಗಿತ್ತು.
ಮಗುವಿನ ಅಜ್ಜಿ ಸರಸ್ವತಿ ಘಟನೆ ಹಿಂದೆ ಮಗುವಿನ ತಂದೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದರಿಂದ ಈ ವಿಚಾರ ಬಹಿರಂಗವಾಗಿದೆ. ಮಗುವಿನ ಕಾಲಿಗೆ ಸ್ವತಃ ನೀಚ ತಂದೆ ಸಿದ್ದಪ್ಪನೇ ಬಟ್ಟೆ ಕಟ್ಟಿ ಬೋರವೆಲ್ಗೆ ಬಿಸಾಕಿ, ಬಳಿಕ ಮಗು ಕಾಣೆಯಾಗಿದೆ ಜಮೀನಿನಲ್ಲಿ ಬೋರ್ವೆಲ್ ಇದೆ ಬನ್ನಿ ನೋಡೋಣ ಎಂದು ಪೊಲೀಸರನ್ನು ಕರೆದೊಯ್ದಿದ್ದ.
ಇದೀಗ ಕೊಳವೆ ಬಾವಿಗೆ ಬಿಸಾಕಿರುವ ಅಪ್ಪನ ಹೇಯ ಕೃತ್ಯದಿಂದ ಸಾವನ್ನಪ್ಪಿದ ಎಳೆಯ ಮಗು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಯಬಾಗಕ್ಕೆ ರವಾನಿಸಲಾಗಿದೆ.
" ಅಳಿಯ ಮದುವೆಯಾದ ಸ್ವಲ್ಪ ದಿನದಲ್ಲೇ ಮಗಳ ಮೇಲೆ ಸಂಶಯ ಪಡುತ್ತಿದ್ದ. ಮಗು ತನ್ನದಲ್ಲ ಎಂದು ಕಿರಿಕಿರಿ ಮಾಡುತ್ತಿದ್ದ, ಗ್ರಾಮದ ಮುಖಂಡರು, ಕುಟುಂಬಸ್ಥರು ರಾಜಿ ಪಂಚಾಯಿತಿ ಕೂಡ ಮಾಡಿ ಬುದ್ದಿವಾದ ಹೇಳಿದ್ದರು. ಮಗನನ್ನು ನೋಡಲು ಈತನಿಗೆ ಆಗದಿದ್ರೆ ನಾನು ಸಾಕುತ್ತಿದ್ದೆ. ಸೋದರಳಿಯ ಅಂತಾ ಮಗಳನ್ನು ಮದುವೆ ಮಾಡಿಕೊಟ್ಟೆ. ಮಗಳ ಹಾಗೂ ಮೊಮ್ಮಗವಿನ ಬಾಳನ್ನೇ ಹಿಸುಕಿ ಹಾಕಿದ" ಎಂದು ಅಜ್ಜಿ ಸರಸ್ವತಿ ಕಣ್ಣೀರು ಹಾಕಿದ್ದಾರೆ.