ಚಂಡೀಗಢ, ಸೆ.20 (DaijiworldNews/PY): ಚಮ್ಕೌರ್ ಸಾಹಿಬ್ ಕ್ಷೇತ್ರದ ಶಾಸಕ ಚರಣ್ಜಿತ್ ಸಿಂಗ್ ಚನ್ನಿ (51) ಅವರು ಪಂಜಾಬ್ನ ನೂತನ ಸಿಎಂ ಆಗಿ ಆಯ್ಕೆಯಾಗಿದ್ದು, ಸೋಮವಾರ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇವರು ಪಂಜಾಬ್ನ ಮೊದಲ ದಲಿತ ಸಿಎಂ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೂತನ ಮುಖ್ಯಮಂತ್ರಿ ಆಯ್ಕೆಯಾದ ಬೆನ್ನಲ್ಲೇ ಟೀಕಾ ಪ್ರಹಾರ ಆರಂಭಿಸಿರುವ ಬಿಜೆಪಿ, "ಮೂರು ವರ್ಷದಿಂದ ಚರಣ್ಜಿತ್ ಸಿಂಗ್ ಚನ್ನಿ ಮೀಟೂ ಪ್ರಕರಣ ಎದುರಿಸುತ್ತಿದ್ದಾರೆ. 2018ರಲ್ಲಿ ಅವರು ಮಹಿಳಾ ಐಎಎಸ್ ಅಧಿಕಾರಿಗೆ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದರು. ಪಂಜಾಬ್ನ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ" ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣವು ಮೂರು ವರ್ಷದ ಹಿಂದೆ ನಡೆದಿದ್ದು, ಈ ವರ್ಷದ ಮೇ ತಿಂಗಳಿನಲ್ಲಿ ಪುನಃ ಮುನ್ನೆಲೆಗೆ ಬಂದಿತ್ತು.