ತಿರುವನಂತಪುರ, ಸೆ.19 (DaijiworldNews/PY): "ಗಾಂಧಿ ಕುಟುಂಬದವರು ಐದು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಕೂಡಾ ಅಮೇಠಿ ಅಭಿವೃದ್ದಿಯಾಗಿಲ್ಲ. ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಜನರನ್ನು ತಲುಪಿಲ್ಲ" ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
"ಅಮೇಠಿಯಿಂದ ದೂರವಿರುವ ಊರಿನಲ್ಲಿ ನಾನಿದ್ದು, ಇಲ್ಲಿ ಇಂಟರ್ನೆಟ್ ಸಂಪರ್ಕ ಸಿಗುತ್ತಿಲ್ಲ. ಇದರಿಂದ ಕಾರ್ಯಕ್ರಮದಲ್ಲಿ ನಿಗದಿತ ಸಮಯದೊಳಗೆ ಭಾಗವಹಿಸಲು ಸಾಧ್ಯವಾಗಲಿಲ್ಲ" ಎಂದಿದ್ದಾರೆ.
"ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಪಡೆಯುವುದು ಸವಾಲಿನ ಕಾರ್ಯ. ಈ ಕಾರಣದಿಂದ ನಾನು ಸೇವಾ ಭಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪರದಾಡಬೇಕಾಯಿತು. ಐದು ದಶಕಗಳ ಕಾಲ ಗಾಂಧಿ ಕುಟುಂಬಸ್ಥರು ಅಧಿಕಾರಿದಲ್ಲಿದ್ದರೂ ಕೂಡಾ, ಈ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯವಾಗಿಲ್ಲ" ಎಂದು ಹೇಳಿದ್ದಾರೆ.