ನವದೆಹಲಿ,ಸ. 19 (DaijiworldNews/HR): ತಾನು ಸ್ವೀಕರಿಸಿದ ಉಡುಗೊರೆಗಳು, ಸ್ಮರಣಿಕೆಗಳ ಹರಾಜಿನಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಪ್ರಧಾನ ಮೋದಿ ಅವರು ಅನೇಕ ವರ್ಷಗಳಿಂದ ತಾವು ಪಡೆದ ಅನೇಕ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಹರಾಜಿನಲ್ಲಿ ಭಾಗವಹಿಸುವಂತೆ ಜನರನ್ನು ಒತ್ತಾಯಿಸಿದ್ದು, ಅದರಿಂದ ಬಂದ ಆದಾಯವು 'ನಮಾಮಿ ಗಂಗೆ' ಉಪಕ್ರಮಕ್ಕೆ ಹೋಗುತ್ತದೆ ಎಂದು ಹೇಳಿದ್ದಾರೆ.
ಇನ್ನು "ನಾನು ಹರಾಜಿನಲ್ಲಿರುವ ಹಲವಾರು ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಸ್ವೀಕರಿಸಿದ್ದು, ಇದರಲ್ಲಿ ನಮ್ಮ ಒಲಿಂಪಿಕ್ಸ್ ವೀರರು ನೀಡಿದ ವಿಶೇಷ ಸ್ಮರಣಿಕೆಗಳು ಸೇರಿವೆ. ಹರಾಜಿನಲ್ಲಿ ಭಾಗವಹಿಸಿ "ಎಂದು ಮೋದಿ ಟ್ವೀಟ್ ಮಾಡಿದ್ದಾರೆ.