ನವದೆಹಲಿ, ಸೆ.19 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನದಂದು ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೊನಾ ಲಸಿಕೆ ನೀಡಿರುವ ಕುರಿತು ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಾರ್ಯಕ್ರಮ ಮುಗಿಯಿತು" ಎಂದಿದ್ದಾರೆ.
ಕಳೆದ ಹತ್ತು ದಿನಗಳ ಅವಧಿಯಲ್ಲಿ ಕೊರೊನಾ ಲಸಿಕೆ ನೀಡಿರುವುದಕ್ಕೆ ಸಂಬಂಧಿಸಿ ಕೋವಿನ್ ವೆಬ್ಸೈಟ್ನಲ್ಲಿ ಲಭ್ಯವಿರುವ ಗ್ರಾಫ್ವೊಂದನ್ನು ಹಂಚಿಕೊಂಡಿದ್ದಾರೆ.
"ದಾಖಲೆಯ ಪ್ರಮಾಣದಲ್ಲಿ ಕೊರೊನಾ ಲಸಿಕೆ ನೀಡಿದ ಬಳಿಕ, ಲಸಿಕೆ ನೀಡಿಕೆಯಲ್ಲಿ ಪುನಃ ಇಳಿಕೆ ಕಂಡುಬಂದಿದೆ" ಎಂದಿದ್ದಾರೆ.
ಶನಿವಾರವೂ ಟ್ವೀಟ್ ಮಾಡಿದ್ದ ಅವರು, "ಒಂದೇ ದಿನ 1.2 ಕೋಟಿಗೂ ಆಧಿಕ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ದೇಶಕ್ಕೆ ಈ ರೀತಿಯಾದ ಕಾರ್ಯಗಳು ಅವಶ್ಯಕತೆ ಇದೆ" ಎಂದಿದ್ದರು.