ನವದೆಹಲಿ, ಸೆ.19 (DaijiworldNews/PY): "ಅಫ್ಗಾನಿಸ್ತಾನ ತಾಲಿಬಾನ್ ನಿಯಂತ್ರಣದಲ್ಲಿರುವುದರಿಂದ ಭಾರತ ಅಲ್ಲಿ ಈಗಾಗಲೇ ಮೂಲಸೌಕರ್ಯಕ್ಕೆ ಹೂಡಿರುವ ಬಂಡವಾಳವನ್ನು ಮುಂದುವರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
"ಆ ದೇಶದಲ್ಲಿ ಹಲವು ಮೂಲಸೌಕರ್ಯ ಯೋಜನೆಗಳು ಭಾರತದಿಂದ ಪೂರ್ಣಗೊಂಡಿದ್ದರೂ ಕೂಡಾ, ಇನ್ನೂ ಕೆಲವು ಪೂರ್ಣಗೊಳ್ಳಬೇಕಿದೆ" ಎಂದಿದ್ದಾರೆ.
"ಅಲ್ಲಿ ನಾವು ಸಲ್ಮಾ ಅಣೆಕಟ್ಟು ನಿರ್ಮಿಸಿದ್ದೇವೆ. ನಾವು ಅಲ್ಲಿ ಜಲಸಂಪನ್ಮೂಲ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇವೆ" ಎಂದು ಹೇಳಿದ್ದಾರೆ.
"ಮೈತ್ರಿ ರಾಷ್ಟ್ರವಾಗಿ ಅಲ್ಲಿ ನಾವು ಕೆಲವು ರಸ್ತೆಗಳನ್ನು ನಿರ್ಮಿಸಲು ಸಹ ಅಫ್ಗಾನಿಸ್ತಾನದ ಸರ್ಕಾರದೊಂದಿಗೆ ಚರ್ಚಿಸಿದ್ದೆವು. ಆದರೆ, ಆ ಕಾಮಗಾರಿಗಳನ್ನು ನಿರ್ಮಿಸದೇ ಇದ್ದಿದ್ದು ಒಳ್ಳೆಯದೇ ಆಯಿತು" ಎಂದಿದ್ದಾರೆ.