ದಾವಣಗೆರೆ, ಸ. 19 (DaijiworldNews/HR): "ಬೆಲೆ ಏರಿಕೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿದ್ದು ಹಾಗಾಗಿ ರಾಜಕಾರಣಕ್ಕೂ ದರ ಏರಿಕೆಗೂ ಸಂಬಂಧ ಇಲ್ಲ. ಜನರಿಗೆ ಯಾವ ಪಕ್ಷ ನಂಬಬೇಕು ಎನ್ನುವುದು ಗೊತ್ತು" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, "ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದ ಸರ್ಕಾರ ತರುವುದಕ್ಕೆ ಇಂದಿನ ಕಾರ್ಯಕಾರಿಣಿಯ ಗುರಿಯಾಗಿದ್ದು, ಮುಂದಿನ ರಾಜಕೀಯ ತಿರುವು ದಾವಣಗೆರೆಯಿಂದ ಆರಂಭ ಆಗುತ್ತದೆ" ಎಂದರು.
ಇನ್ನು "ಯಾವುದೇ ವಸ್ತುವಿನ ದರ ಏರಿಕೆಯೂ ಹಾಗೂ ರಾಜಕಾರಣಕ್ಕೂ ಯಾವುದೇ ಸಂಭಂಧವಿಲ್ಲ" ಎಂದು ಹೇಳಿದ್ದಾರೆ.