ರಾಂಚಿ, ಸ. 19 (DaijiworldNews/HR): ಕರ್ಮ ಪೂಜೆಯ ಬಳಿಕ ನೀರಿನಲ್ಲಿ ಇಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ 12 ರಿಂದ 20 ವರ್ಷ ವಯಸ್ಸಿನ ಏಳು ಹುಡುಗಿಯರು ಮೃತಪಟ್ಟಿರುವ ಘಟನೆ ಜಾರ್ಖಂಡ್ ನ ಲತೇಹಾರ್ ಜಿಲ್ಲೆಯ ಬಾಲುಮಠದಲ್ಲಿ ನಡೆದಿದ್ದು, ಅವರಲ್ಲಿ ಆರು ಮಂದಿ ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದರ ಬಗ್ಗೆ ಸಂತಾಪ ಸುಚಿಸಿದ್ದಾರೆ.
ಜಾರ್ಖಂಡ್ ನಲ್ಲಿ ನಡೆಯುವ ಪ್ರಮುಖ ಹಬ್ಬವಾದ ಕರ್ಮ ಪೂಜಾ ಬಳಿಕ ಹುಡುಗಿಯರು ಕೊಳಕ್ಕೆ ಹೋಗಿದ್ದಾಗ ಬುಕ್ರು ಗ್ರಾಮದ ಮನಂದಿಹ್ ತೋಲಾದಲ್ಲಿ ಈ ದುರಂತ ನಡೆದಿದೆ.
10 ಬಾಲಕಿಯರು 'ಕರ್ಮ ದಾಲಿ' ವಿಸರ್ಜನೆಗೆ ಕೆರೆಗೆ ತೆರಳಿದ್ದ ವೇಳೆ ಒಬ್ಬಾಕೆ ಕಾಲು ಜಾರಿ ನೀರಿನಲ್ಲಿ ಬಿದ್ದಾಗ ರಕ್ಷಿಸಲು ಹೋದ ಉಳಿದವರೂ ಒಬ್ಬೊಬ್ಬರಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿದ್ದಾರೆ.