ಜಬಲಾಪುರ, ಸ. 19 (DaijiworldNews/HR): ಆದಿವಾಸಿಗಳ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಮಾತನಾಡುವುದು ಕೇವಲ ಅವರ ಮತಗಳನ್ನು ಪಡೆಯಲಷ್ಟೇ. ಆದರೆ ಬಿಜೆಪಿ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ಯಾವಾಗಲೂ ಮತಗಳನ್ನು ಪಡೆಯಲು ಬುಡಕಟ್ಟು ಕಲ್ಯಾಣದ ಬಗ್ಗೆ ಮಾತನಾಡುತ್ತಿತ್ತು, ಆದರೆ ಅವರ ಅಭಿವೃದ್ಧಿಗಾಗಿ ಏನನ್ನೂ ಮಾಡಲಿಲ್ಲ. ಬುಡಕಟ್ಟು ಮತಗಳನ್ನು ವಿಭಜಿಸುವುದು ಅವರ ಉದ್ದೇಶವಾಗಿತ್ತು. ಆದರೆ ಬಿಜೆಪಿಯು ಆದಿವಾಸಿಗಳಿಗ ಅಭಿವೃದ್ಧಿಗಾಗಿ ಬದ್ಧವಾಗಿದೆ" ಎಂದರು.
ಇನ್ನು "ಬಿಜೆಪಿಯು ಆದಿವಾಸಿಗಳಿಗೆ ಅವರ ಪ್ರದೇಶಗಳಲ್ಲಿ ಮನೆ, ವಿದ್ಯುತ್ ಸರಬರಾಜು ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು, ಅವರು ಗೌರವಾನ್ವಿತ ಜೀವನ ನಡೆಸಲು ಪಕ್ಷವು ಈಗ ಅವರ ಮನೆಗಳಿಗೆ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದೆ" ಎಂದಿದ್ದಾರೆ.
2013-14ರ ಕೇಂದ್ರ ಬಜೆಟ್ ನಲ್ಲಿ ಆದಿವಾಸಿಗಳಿಗೆ ಕೇವಲ 4,200 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಮೊತ್ತವನ್ನು ಈಗ 7,900 ಕೋಟಿಗೆ ಹೆಚ್ಚಿಸಲಾಗಿದೆ. ವಿವಿಧ ಸಚಿವಾಲಯಗಳ ಅಡಿಯಲ್ಲಿ ಬುಡಕಟ್ಟು ಅಭಿವೃದ್ಧಿಯ ಘಟಕದ ಬಜೆಟ್ 2021-22ರಲ್ಲಿ 71,900 ಕೋಟಿಗೆ, 2013-14 ರಲ್ಲಿ 21,500 ಕೋಟಿಗೆ ಏರಿದೆ ಎಂದು ಹೇಳಿದ್ದಾರೆ.