ಬೆಂಗಳೂರು, ಸೆ.19 (DaijiworldNews/PY): "ನಮ್ಮ ಕಾನೂನು ವ್ಯವಸ್ಥೆಯನ್ನು ಭಾರತೀಯಗೊಳಿಸುವ ಅಗತ್ಯವಿದೆ" ಎಂದು ನ್ಯಾ. ಎನ್ ವಿ ರಮಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಮ್ಮ ಕಾನೂನಿನ ವ್ಯವಸ್ಥೆಯನ್ನು ಭಾರತೀಯಗೊಳಿಸುವುದು ಇಂದಿನ ಅಗತ್ಯವಾಗಿದೆ. ನಮ್ಮ ವ್ಯವಸ್ಥೆ, ಆಚರಣೆಗಳು, ನಿಯಮಗಳು, ವಸಾಹತುಶಾಹಿ ಮೂಲದ್ದಾಗಿದ್ದು, ಭಾರತೀಯ ಜನಸಂಖ್ಯೆಗೆ ಹಾಗೂ ಕೋರ್ಟ್ಗಳ ಕಾರ್ಯನಿರ್ವಹಣೆಗೆ ಹೊಂದುವುದಿಲ್ಲ" ಎಂದಿದ್ದಾರೆ.
"ದೇಶದ ಗ್ರಾಮೀಣ ಭಾಗಗಳಿಗೆ ಸೇರಿದವರು ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ಸ್ಥಾನಿವಿಲ್ಲವೆಂದು ಭಾವಿಸುತ್ತಾರೆ. ನ್ಯಾಯ ವಿತರಣಾ ವ್ಯವಸ್ಥೆಯನ್ನು ಸರಳಗೊಳಿಸುವುದು ಮತ್ತು ಅದನ್ನು ಇನ್ನಷ್ಟು ಹೆಚ್ಚಿಸುವುದು ಅತ್ಯಗತ್ಯ" ಎಂದು ತಿಳಿಸಿದ್ದಾರೆ.
"ನ್ಯಾಯಾಲಯದಲ್ಲಿ ಸರಳತೆ ನಮ್ಮ ಮುಖ್ಯ ಕಾಳಜಿಯಾಗಿರಬೇಕು. ನ್ಯಾಯಾದಾನವನ್ನು ಹೆಚ್ಚು ಪಾರದರ್ಶಕ, ಸುಲಭ ಹಾಗೂ ಪರಿಣಾಮಕಾರಿಯಾಗಿರುವಂತೆ ಮಾಡುವುದು ಮುಖ್ಯ" ಎಂದಿದ್ದಾರೆ.