ತಿರುವನಂತಪುರಂ, ಸ. 18 (DaijiworldNews/HR): ನವೆಂಬರ್ 1 ರಿಂದ ಕೇರಳದಲ್ಲಿ ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದಾರೆ.
1 ರಿಂದ 7ನೇ ತರಗತಿ ವರೆಗಿನ ಮತ್ತು 10 ಹಾಗೂ 12ನೇ ತರಗತಿಗಳು ನವೆಂಬರ್ 1 ರಂದು ಆರಂಭವಾಗಲಿದ್ದು, ಇತರ ತರಗತಿಗಳು ನವೆಂಬರ್ 15 ರಂದು ಆರಂಭವಾಗಲಿದೆ ಎಂದು ಇಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಕೊರೊನಾ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನು ಪ್ರಾಥಮಿಕ ತರಗತಿಗಳನ್ನು ಮೊದಲು ಪುನರಾರಂಭಿಸಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ ಎಂದು ಪಿಣರಾಯಿ ಹೇಳಿದ್ದಾರೆ.
ಶಾಲಾ ಮಕ್ಕಳಿಗಾಗಿ ವಿಶೇಷ ಮಾಸ್ಕ್ ಗಳನ್ನು ಒದಗಿಸಬೇಕೆಂದು ಸಿಎಂ ಸೂಚಿಸಿದ್ದು, ಅಲ್ಲದೆ ಅಂತಹ ಮಾಸ್ಕ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸುವಂತೆ ಶಾಲೆಗಳಿಗೆ ನಿರ್ದೇಶಿಸಿದ್ದಾರೆ.