ಬೆಂಗಳೂರು, ಸ. 18 (DaijiworldNews/HR): ರಾಜ್ಯದಲ್ಲಿ ಶನಿವಾರ 889 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,91,3713ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಇಂದು 14 ಜನರು ಸಾವನ್ನಪ್ಪಿದ್ದಾರೆ.
ಸಾಂಧರ್ಭಿಕ ಚಿತ್ರ
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ವರದಿಗಳ ಪ್ರಕಾರ 1080 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಜ್ಯದಲ್ಲಿಂದು 15755 ಸಕ್ರಿಯ ಪ್ರಕರಣಗಳಿವೆ ಹಾಗೂ ಪಾಸಿಟಿವಿಟಿ ದರ 0.63 % ಮತ್ತು ಡೆತ್ ರೇಟ್ 1.57 % ಇದೆ.
ಬೆಂಗಳೂರಿನಲ್ಲಿ 263 ಹೊಸ ಪ್ರಕರಣಗಳು ಪತ್ತೆಯಾಗಿದ್ದು,222 ಸೋಂಕಿತರು ಗುಣಮುಖರಾಗಿದ್ದಾರೆ. 6 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.