ಮಹಾರಾಷ್ಟ್ರ, ಸೆ 18 (DaijiworldNews/MS): ಹಾವೆಂದರೆ ಕೇಳಬೇಕೇ ಜನ ಹೌಹಾರೋದು ಸಹಜ..ಆದರೆ ಮಹಾರಾಷ್ಟ್ರದ ಬೊರ್ಖೇಡಿ (ಕಾಲಾ) ಹಳ್ಳಿಯೊಂದರಲ್ಲಿ ಕುತ್ತಿಗೆಗೆ ಸುತ್ತಿಕೊಂಡಿದ್ದ ನಾಗರಹಾವಿನೊಂದಿಗೆ ಬಾಲಕಿ ೨ ಗಂಟೆಗಳ ಕಾಲ ಶಾಂತವಾಗಿಯೇ ಮಲಗಿದ್ದಳು..ಕೊನೆಗೆ ಹಾವಿನಿಂದ ರಕ್ಷಿಸಲು ಬಂದ ವ್ಯಕ್ತಿ ಹಾವು ಹಿಡಿಯುವ ವೇಳೆ ಹಾವು ಗಾಬರಿಯಾಗಿ ಬಾಲಕಿಗೆ ಕಚ್ಚಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಶನಿವಾರ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಕುತ್ತಿಗೆಯಲ್ಲಿ ಸುರುಳಿಯಾಗಿ ಉಳಿದಿದ್ದ ಹಾವಿನಿಂದ ಕಚ್ಚಲ್ಪಟ್ಟ 7 ವರ್ಷದ ಹುಡುಗಿ ಪರಿ, ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೇವಾಗ್ರಾಮದಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.ಆಕೆಯ ಸ್ಥಿತಿ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ" ಎಂದು ಎಂಜಿಐಎಂಎಸ್ ವಿಭಾಗದ ಎಚ್ಒಡಿ ಡಾ. ಮನೀಶ್ ಜೈನ್ ಗುರುವಾರ ಹೇಳಿದ್ದಾರೆ.
ಶನಿವಾರ ಮಧ್ಯರಾತ್ರಿ ಈ ವಿಚಿತ್ರ ಘಟನೆ ನಡೆದಿದೆ. ರಾತ್ರಿ 11.45 ರ ಸುಮಾರಿಗೆ ಶಬ್ದ ಕೇಳಿ ಎಚ್ಚರವಾದಾಗ ಬಾಲಕಿಯ ತಾಯಿ ಹೇಮಲತಾ ಕುತ್ತಿಗೆಗೆ ಹಾವು ಸುತ್ತಿರುವುದನ್ನು ಮೊದಲು ಗಮನಿಸಿದ್ದಾಳೆ . ಭಯಾನಕ ದೃಶ್ಯ ನೋಡಿ ಭಯಗೊಂಡರೂ ತನ್ನ ಮಗಳನ್ನು ಶಾಂತವಾಗಿರಲು ಮತ್ತು ಸ್ವಲ್ಪವೂ ಚಲಿಸದಂತೆ ಹೇಳಿದ್ದಾಳೆ. ಇದೇ ವೇಳೆ ತಂದೆ ಪದ್ಮಾಕರ್ ಗಡ್ಕರಿ ನೆರೆಹೊರೆಯವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಆದರೆ ಹಾವು ತನ್ನಿಂದ ತಾನೇ ದೂರ ಹೋಗುತ್ತದೆ ಎಂದು ಕುಟುಂಬದವರು ಭಾವಿಸಿ ಚಲಿಸದಂತೆ ಮಲಗಲು ಹೋಗಿದ್ದಾರೆ. ವಿಷಕಾರಿ ಹಾವು (ನಾಗರಹಾವು) ಎರಡು ಗಂಟೆಯವರೆಗೆ ಸುಮಾರು 1.45 ಗಂಟೆಯವರೆಗೆ ಆಕೆಯ ಕುತ್ತಿಗೆಗೆ ಸುತ್ತಿಕೊಂಡಿದೆ. ಜನ ಈ ವೇಳೆ ಫೋಟೋ ವೀಡಿಯೊ ಚಿತ್ರೀಕರಿಸಿದ್ದಾರೆ
ಆದರೆ ಹಾವು ಹುಡುಗಿ ಕುತ್ತಿಗೆ ಬಿಟ್ಟು ಕದಲದ ಕಾರಣ ಅಂತಿಮವಾಗಿ, ಹಾವು ಹಿಡಿಯುವಾತನನ್ನು ಕರೆಸಲಾಯಿತು. ಸುಮಾರು ರಾತ್ರಿ 1.45 ಕ್ಕೆ ಸ್ಥಳಕ್ಕೆ ಬಂದು ಹಿಡಿಯಲು ಪ್ರಯತ್ನಿಸಿದಾಗ ಹಾವು ಬಾಲಕಿಯನ್ನು ಅವಳ ಎಡಗೈಯ ಮೊಣಕೈ ಬಳಿ ಕಚ್ಚಿದೆ. ಈ ವೇಳೆ ಎಲ್ಲರೂ ಹುಡುಗಿಯನ್ನು ರಕ್ಷಿಸಲು ಧಾವಿಸಿದಾಗ ಹಾವು ಗಲಿಬಿಲಿಯಲ್ಲಿ ಕಣ್ಮರೆಯಾಗಿದೆ.