ನವದೆಹಲಿ, ಸೆ 18 (DaijiworldNews/MS): ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ಪ್ರಯೋಗಗಳು ಸುಗಮವಾಗಿ ನಡೆಯುತ್ತಿದ್ದು ಎಲ್ಲವೂ ಸರಿಯಾಗಿ ನಡೆದರೆ 2022 ರ ಜನವರಿ-ಫೆಬ್ರವರಿ ವೇಳೆಗೆ ಮಕ್ಕಳಿಗಾಗಿ ಲಸಿಕೆ ಲಭ್ಯವಾಗಬಹುದು ಎಂದು ಸೀರಂ ಇನ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ತಿಳಿದರು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, "ಭಾರತದಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ನೀಡುವುದು ಇನ್ನು ಪ್ರಾಯೋಗಿಕ ಹಂತದಲ್ಲಿದೆ. ಹಲವಾರು ಸ್ವಯಂಸೇವಕರಿಗೆ ಲಸಿಕೆ ನೀಡಲಾಗಿದೆ ಮತ್ತು ಇದರ ಮೇಲ್ವಿಚಾರಣೆ ಅಧ್ಯಯನ ಸುಗಮವಾಗಿ ನಡೆಯುತ್ತಿದೆ. ವರ್ಷದ ಅಂತ್ಯದ ವೇಳೆಗೆ ನಮಗೆ ವರದಿ ಸಿಗಲಿದೆ, ಎಂದು ಹೇಳಿದರು.
3-4 ತಿಂಗಳುಗಳು ಕನಿಷ್ಠ ಅವಧಿಯಾಗಿದ್ದು, ಲಸಿಕೆ ಎಷ್ಟು ಸುರಕ್ಷಿತ ಮತ್ತು ಚೆನ್ನಾಗಿ ಸ್ವೀಕರಿಸಲ್ಪಟ್ಟಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಪ್ರತಿಯೊಂದು ಹಂತ-ಹಂತವಾಗಿ ಹೋಗುತ್ತಿದ್ದೇವೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಹ ವಿಚಾರಣೆಗೆ ಸೇರಿಸಲಾಗುತ್ತಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಬೇಕೆಂದು ಬಯಸುತ್ತಾರೆ. ಹೀಗಾಗಿ ಮುಂದಿನ ವರ್ಷ ಜನವರಿ-ಫೆಬ್ರವರಿ ವೇಳೆಗೆ ಕೊವಾಕ್ಸಿನ್ ಲಭ್ಯವಾಗಬಹುದು ಎಂಬ ವಿಶ್ವಾಸ್ ನಮಗಿದೆ. . ಆದಾಗ್ಯೂ, ಡಿಸಿಜಿಐ ಅಂತಿಮ ನಿರ್ಧಾರ ಬಳಿಕವೇ ಮಕ್ಕಳಿಗೆ ಲಸಿಕೆ ಲಭಿಸುತ್ತದೆ ಎಂದು ಹೇಳಿದರು.