ಅಸ್ಸಾಂ, ಸ. 18 (DaijiworldNews/HR): ಪೊಲೀಸರೊಂದಿಗೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಹೊಸದಾಗಿ ಮೂಡಿದ ಯುನೈಟೆಡ್ ಲಿಬರೇಷನ್ ಆಫ್ ಬೋಡೋಲ್ಯಾಂಡ್(ಯುಎಲ್ಬಿ) ಗುಂಪಿನ ಇಬ್ಬರು ಉಗ್ರರು ಹತರಾದ ಘಟನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಪೊಲೀಸರು ಉಗ್ರಗಾಮಿ ಗುಂಪಿನ ಶಿಬಿರವನ್ನು ಭೇದಿಸಿದ್ದರು ಮತ್ತು ಆ ಪ್ರದೇಶದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಗ್ರೆನೇಡ್ ಗಳು ಮತ್ತು ಇತರ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದ್ದರು.
ಇನ್ನು ಅಸ್ಸಾಂ ಪೊಲೀಸರ ಡಾ. ಎಲ್.ಆರ್.ಬಿಸ್ನೋಯ್ ವಿಶೇಷ ಡಿಜಿ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಕೊಕ್ರಜಾರ್ ಜಿಲ್ಲೆಯ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಎನ್ ಕೌಂಟರ್ ಸ್ಥಳದಿಂದ ಎರಡು ಪಿಸ್ತೂಲ್ ಗಳು, ಎಂಟು ಸುತ್ತಿನ ಜೀವಂತ ಮದ್ದುಗುಂಡುಗಳು, 14 ಸುತ್ತುಖಾಲಿ ಕಾರ್ಟ್ರಿಡ್ಜ್ ಗಳು, ಎಂಟು ಹ್ಯಾಂಡ್ ಗ್ರೆನೇಡ್ ಗಳು ಮತ್ತು ಇತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.