ಬೆಂಗಳೂರು, ಸೆ 18 (DaijiworldNews/MS): ರಾಜ್ಯದಲ್ಲಿ ಸೀಸನಲ್ ವೈರಲ್ ಪ್ಲ್ಯೂ ಹೆಚ್ಚಾಗಿದೆ ಅಷ್ಟೇ. ಹೀಗಾಗಿ ಮಕ್ಕಳು, ದೊಡ್ಡವರಿಗೆ ಹೆಚ್ಚಾಗಿ ಜ್ವರ ಬರುತ್ತಿದೆ ಎಲ್ಲಿಯೂ ಸೋಂಕು ಹೆಚ್ಚಳ ಕಂಡು ಬಂದಿಲ್ಲ ಆದರೆ ಜನ ಜಾಗೃತರಾಗಿಯೇ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ರಾಜ್ಯದಲ್ಲಿ ಮಕ್ಕಳು, ದೊಡ್ಡವರಲ್ಲಿ ಜ್ವರ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಸೀಜನ್ ಪ್ಲ್ಯೂ. ಜ್ವರ ಬಂದಿರುವವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಲಸಿಕೆ ಪಡೆದುಕೊಳ್ಳುವಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ 3 ಕೋಟಿ ಲಸಿಕೆ ಗುರಿ ತಲುಪಿದ್ದೇವೆ, ಅತಿ ಕಡಿಮೆ ಲಸಿಕೆ ಹಂಚಿಕೆ ಮಾಡಿದ್ದು ಕಲ್ಬುರ್ಗಿ ಜಿಲ್ಲೆಯಲ್ಲಿ . ಹಾಗೆಂದು ಇದು ಇದು ಆಡಳಿತದ ವೈಫಲ್ಯವಲ್ಲ. ಇಲ್ಲಿ ಜನರು ಕೋವಿಡ್ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಅಮೆರಿಕಾದಲ್ಲೇ ಜನರಿಗೆ ಇನ್ನೂ ಲಸಿಕೆ ಬಗ್ಗೆ ಹಿಂಜರಿಕೆ ಇದೆ. ಹೀಗಾಗಿ ಜನರಲ್ಲಿ ಭಯ ಹೋಗಲಾಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.