ಬೀದರ್, ಸ.17 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುದಿನವಾರ ಇಂದು ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಜನಿಸಿದ ಮಗನಿಗೆ 'ನರೇಂದ್ರ' ಎಂದು ಹೆಸರಿಟ್ಟಿದ್ದಾರೆ.
ಚಿಟಗುಪ್ಪ ತಾಲೂಕಿನ ನಿರ್ಣಾವಾಡಿಯ ಅಂಬಿಕಾ ವೀರಶೆಟ್ಟಿ ರಂಜೇರಿ ದಂಪತಿ ತಮ್ಮ ಮಗನಿಗೆ ನರೇಂದ್ರ ಎಂದು ನಾಮಕರಣ ಮಾಡಿದ್ದು, ಪ್ರಧಾನಿ ಜನ್ಮದಿನದಂದು ಪುತ್ರ ಜನಿಸಿದ್ದಕ್ಕೆ ಸಂತಸವಾಗಿ ಈ ದಿನದ ಸವಿನೆನಪಿಗಾಗಿ ಮಗನಿಗೆ ನರೇಂದ್ರ ಎಂದು ಹೆಸರಿಟ್ಟಿದ್ದೇವೆ ಎಂದು ಅಂಬಿಕಾ ಹೇಳಿದ್ದಾರೆ.
ಇನ್ನು ದಂಪತಿ ತಮ್ಮ ಪುತ್ರನಿಗೆ ನರೇಂದ್ರ ಎಂದು ಹೆಸರು ಇಟ್ಟಿರುವುದು ಸಂತಸ ತಂದಿದ್ದು, ಪ್ರಧಾನಿ ಜನ್ಮದಿನದಂದು ಕರುಳ ಬಳ್ಳಿಗೆ ನರೇಂದ್ರ ಎಂದು ನಾಮಕರಣ ಮಾಡಿರುವುದು ದೇಶದ ಜನ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.