ಯಾದಗಿರಿ, ಸ.17 (DaijiworldNews/HR): ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮಾಚಗುಂಡಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಕಲುಷಿತ ನೀರು ಸೇವಿಸಿದ ಪರಿಣಾಮ ಮಕ್ಕಳು, ಹಿರಿಯರು ಸೇರಿ ಗ್ರಾಮದ ಬಹುತೇಕರು ಅಸ್ವಸ್ಥರಾಗಿದ್ದು, ಮೂರ್ನಾಲ್ಕು ದಿನಗಳಿಂದ ಹೆಚ್ಚಿನ ಸಂಕ್ಯೆಯಲ್ಲಿ ಜನ್ ಅಆಸ್ಪತ್ರೆಗೆ ಬರುತ್ತಿರುತ್ತಿರುವುದರಿಂದ ಬೆಡ್ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಗ್ರಾಮದಲ್ಲಿ ತೆರೆದ ಬಾವಿ ಇದ್ದು, ಅದರಿಂದಾನೆ ಇಡೀ ಗ್ರಾಮದ ಜನರಿಗೆ ನೀರು ಸರಬರಾಜು ಆಗುತ್ತೆ. ಬಾವಿಯಿಂದ ನೀರಿನ ಟ್ಯಾಂಕಿಗೆ ನೀರು ಸಪ್ಲೈ ಆಗುತ್ತಿದ್ದು, ಅಲ್ಲಿಂದ ನಳ್ಳಿ ಮೂಲಕ ಗ್ರಾಮದ ಮನೆಗಳಿಗೆ ನೀರು ಸರಬರಾಜು ಆಗುತ್ತೆದೆ. ಆದರೆನಲ್ಲಿ ನೀರು ಸಫ್ಲೈ ಆಗಲು ವಾಲ್ ತೆರೆಯಬೇಕು. ಈ ವಾಲ್ ಬಳಿ ಚರಂಡಿ ನೀರು ಸೇರಿಕೊಂಡಿದ್ದೇ ಜನರ ಆರೋಗ್ಯ ಏರುಪೇರಾಗಲು ಕಾರಣ ಎಂದು ಅಲ್ಲಿಗೆ ಭೇಟಿ ನೀಡಿದ ವೈದ್ಯರು ತಿಳಿಸಿದ್ದಾರೆ.