ನವದೆಹಲಿ, ಸೆ.17 (DaijiworldNews/PY): ಆಮ್ ಆದ್ಮಿ ಮುಖಂಡ ರಾಘವ್ ಚಡ್ಡಾ ಅವರು ಪಂಜಾಬ್ನ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ನವಜೋತ್ ಸಿಂಗ್ ಸಿಧು ಪಂಜಾಬ್ ರಾಜಕಾರಣದ ರಾಖಿ ಸಾವಂತ್" ಎಂದು ರಾಘವ್ ಚಡ್ಡಾ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಘವ್, "ಅಮರಿಂದರ್ ಸಿಂಗ್ ಅವರ ವಿರುದ್ದ ವಾಗ್ದಾಳಿ ನಡೆಸಿರುವ ಸಿಧು ಅವರನ್ನು ಕಾಂಗ್ರೆಸ್ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದೆ. ಹಾಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ದ ಅವರು ಹೇಳಿಕೆ ನೀಡಿದ್ದಾರೆ. ನವಜೋತ್ ಸಿಂಗ್ ಸಿಧು ಪಂಜಾಬ್ ರಾಜಕೀಯದ ರಾಖಿ ಸಾವಂತ್" ಎಂದಿದ್ದಾರೆ.
"ನಾಳೆಯವರೆಗೆ ಕಾಯಿರಿ, ಸಿಧು ಅವರು ಅಮರಿಂದರ್ ಸಿಂಗ್ ಅವರ ವಿರುದ್ದ ಹೇಳಿಕೆ ನೀಡುವುದನ್ನು ಆರಂಭಿಸುತ್ತಾರೆ" ಎದು ಹೇಳಿದ್ದಾರೆ.