ಮುಂಬೈ, ಸೆ 17 (DaijiworldNews/MS): ಮುಂಬೈ ಹೈಕೋರ್ಟ್ ಸಾಂತಾಕ್ರೂಜ್ ನಿವಾಸಿಯನ್ನು ತನ್ನ 90 ವರ್ಷದ ತಂದೆ ಮತ್ತು 89 ವರ್ಷದ ತಾಯಿ ವಾಸವಾಗಿದ್ದ ಫ್ಲಾಟ್ನಿಂದ ಹೊರಹೋಗುವಂತೆ ಆದೇಶಿಸಿದೆ.
ಸಾಂತಾಕ್ರೂಜ್ ನಿವಾಸಿ ಹಾಗೂ ಆತನ ಪತ್ನಿಗೆ ವೃದ್ಧ ಹೆತ್ತವರ ಫ್ಲಾಟ್ ಅನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿ ಗಿರೀಶ್ ಕುಲಕರ್ಣಿ ಅವರ ಏಕ ನ್ಯಾಯಾಧೀಶರ ನ್ಯಾಯಪೀಠವೂ ಸೂಚಿಸಿದೆ
ಆಶಿಶ್ ದಲಾಲ್ ಮತ್ತು ಆತನ ಪತ್ನಿಗೆ ಹೆತ್ತವರ ಒಡೆತನದ ಫ್ಲಾಟ್ ತೊರೆಯುವಂತೆ ಸೂಚಿಸಿದೆ. ವೃದ್ಧ ದಂಪತಿಗಳು ತಮ್ಮ ಏಕೈಕ ಮಗ ಮತ್ತು ಆತನ ಹೆಂಡತಿಯ ಕೈಯಲ್ಲಿ "ನರಳುತ್ತಿದ್ದಾರೆ". ಹೀಗಾಗಿ ಫ್ಲಾಟ್ ಅನ್ನು ಖಾಲಿ ಮಾಡುವಂತೆ ದಲಾಲ್ಗೆ ನಿರ್ದೇಶನ ನೀಡಿರುವ ಹೈಕೋರ್ಟ್, ಪೋಷಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ತಮ್ಮ ಸ್ವಂತ ಪುತ್ರರ ಕಿರುಕುಳದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನ್ಯಾಯಾಲಯಗಳ ಮೊರೆ ಹೋಗಬೇಕು ಎಂದು ಸಲಹೆ ನೀಡಿದೆ.
"ಇದು ವೃದ್ಧ ಹೆತ್ತವರ ತಮ್ಮ ಒಬ್ಬನೇ ಮಗ ಮತ್ತು ಸೊಸೆ ಕೈಯಲ್ಲಿ ನರಳುತ್ತಿರುವ ಪ್ರಕರಣ ಎಂದು ಗಮನಿಸಿದ ಕೋರ್ಟ್, 'ಹೆಣ್ಣು ಮಕ್ಕಳು ಎಂದಿಗೂ ಮಕ್ಕಳು' ಗಂಡು ಮಕ್ಕಳು ಮದುವೆಯಾಗುವವರೆಗೆ ಮಕ್ಕಳು ಎಂಬ ಜನಪ್ರಿಯ ಗಾದೆಮಾತಿನಲ್ಲಿ ಸತ್ಯದ ಅಂಶವಿದೆ ಎಂದು ತರುತ್ತದೆ" ಎಂದು ಹೈಕೋರ್ಟ್ ಹೇಳಿದೆ.