ಬೆಂಗಳೂರು, ಸೆ.17 (DaijiworldNews/PY): 'ಬಾರ್ ಸಲಹೆಗಾರ' ಸಿ ಟಿ ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಛೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ. ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರ ಬದಲು 'ಬಾರ್ ಸಲಹೆಗಾರ' ಸಿ ಟಿ ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಛೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ. ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ! ಎಂದು ಲೇವಡಿ ಮಾಡಿದೆ.
ಶಾಸಕ ಸಿದ್ದು ಸವದಿಯವರಿಂದ ಮಹಿಳೆ ಮೇಲೆ ಹಲ್ಲೆ - ಬಂಧನವಿಲ್ಲ, ಮಾಜಿ ಸಚಿವರು ಅತ್ಯಾಚಾರ ಎಸಗಿದರೂ - ಬಂಧನವಿಲ್ಲ, ಮಾನಪ್ಪ ವಜ್ಜಲ್ರ ಪುತ್ರರಿಂದ ಮಾರಣಾಂತಿಕ ಹಲ್ಲೆ - ದೂರು ದಾಖಲಿಸಲಿಲ್ಲ. ಬಿಜೆಪಿ ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತಿದೆ ಎಂದು ಕಿಡಿಕಾರಿದೆ.
ಹಿಂದೆ ಗೋವಿಂದ್ ಕಾರಜೋಳರ ಪುತ್ರ ಪೊಲೀಸರಿಗೆ 'ಬಾಯಲ್ಲಿ ಬೂಟು ಇಡುತ್ತೇನೆ' ಎಂದು ಬೆದರಿಕೆಯೊಡ್ಡಿದ್ದ. ಇಂದು ಮಾನಪ್ಪ ವಜ್ಜಲ್ ಪುತ್ರರು ನಶೆಯಲ್ಲಿ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಪುತ್ರರನ್ನು ರೌಡಿಗಳನ್ನಾಗಿ ತಯಾರು ಮಾಡುತ್ತಿರುವಂತಿದೆ ಎಂದಿದೆ.