ಬೆಂಗಳೂರು, ಸ.17 (DaijiworldNews/HR): ಕರ್ನಾಟಕದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಇನ್ಮುಂದೆ ಆನ್ಲೈನ್ ಜೂಜು, ಬೆಟ್ಟಿಂಗ್ ಆಡುವವರಿಗೆ 1 ಲಕ್ಷ ರೂ. ದಂಡ, 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಮಂಡಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ್ದು, ಆನ್ ಲೈನ್ ಜೂಜು, ಬೆಟ್ಟಿಂಗ್ ಆಡುವವರಿಗೆ 1 ಲಕ್ಷ ರೂ. ದಂಡ, 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಸಹಾಯಮಾಡಿದವರಿಗೆ 6 ತಿಂಗಳು ಜೈಲು, 10 ಸಾವಿರ ದಂಡ ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರ ಆನ್ಲೈನ್ ಜೂಜನ್ನು ನಿಷೇಧಿಸಲಾಗಿದ್ದು ಮಸೂದೆಯಲ್ಲಿ ಜೂಜು ಹಾಗೂ ಬೆಟ್ಟಿಂಗ್ ಸೇರಿದಂತೆ ಹಣ ನೀಡಿ ಗಳಿಸುವ ಟೋಕನ್ಗಳನ್ನು ಬಳಕೆ ಮಾಡಿ ಆಡುವ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜನ್ನು ಕೂಡ ನಿಷೇಧಿಸಲಾಗಿದೆ.