ನವದೆಹಲಿ, ಸೆ 17 (DaijiworldNews/MS): ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಯೂಟ್ಯೂಬ್ ಮೂಲಕ ಲಕ್ಷಾಂತರ ರೂ. ಗಳಿಸುವವವರ ನಡುವೆ ಯುಟ್ಯೂಬ್ನಿಂದ ಯೋಗ್ಯವಾದ ಮಾಸಿಕ ಆದಾಯವನ್ನು ಪಡೆಯುವ ರಾಜಕಾರಣಿಗಳ ಸಂಖ್ಯೆ ಬಗ್ಗೆ ಬಹುಶಃ ಕಡಿಮೆ ಇರಬಹುದು. ಆದರೆ ಯೂಟ್ಯೂಬ್ ನಿಂದ ನಾನು ತಿಂಗಳಿಗೆ 4 ಲಕ್ಷ ರೂಪಾಯಿ ಸಂಪಾದಿಸ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ತಮ್ಮ ಸ್ಪಷ್ಟ ಶೈಲಿಯ ಮಾತು ಮತ್ತು ನೇರನುಡಿಯ ಹೇಳುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ ಇದೀಗ ಯೂಟ್ಯೂಬ್ ಮೂಲಕ ಗಳಿಕೆಯನ್ನು ಅವರು ಸ್ವತಃ ಬಹಿರಂಗಪಡಿಸಿದ್ದಾರೆ ಮತ್ತು ಯೂಟ್ಯೂಬ್ ನಿಂದ ಪ್ರತಿ ತಿಂಗಳು 4 ಲಕ್ಷ ರೂಪಾಯಿಗಳನ್ನು ಹೇಗೆ ಗಳಿಸಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಪ್ರಗತಿಯನ್ನು ಪರಿಶೀಲಿಸಲು ಹೋದಾಗ, ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ನಿತಿನ್ ಗಡ್ಕರಿ ಕೊರೊನಾ ಸಮಯದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. ಕೋವಿಡ್ -19 ಸಮಯದಲ್ಲಿ, ನಾನು ಎರಡು ಕೆಲಸಗಳನ್ನು ಮಾಡಿದ್ದೇನೆ. ನಾನು ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಉಪನ್ಯಾಸ ನೀಡುತ್ತಿದೆ.
"ನಾನು ಆನ್ಲೈನ್ನಲ್ಲಿ ಅನೇಕ ಉಪನ್ಯಾಸಗಳನ್ನು ನೀಡಿದ್ದೇನೆ, ಹಾಗೂ ಅದನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸದ್ಯ ಈಗ ಅನೇಕ ಮಂದಿ ಆ ವಿಡಿಯೋಗಳನ್ನು ನೋಡುತ್ತಿದ್ದಾರೆ. ದೊಡ್ಡ ವೀಕ್ಷಕರ ಬಳಗದಿಂದಾಗಿ, ಯೂಟ್ಯೂಬ್ ಈಗ ನನಗೆ ತಿಂಗಳಿಗೆ 4 ಲಕ್ಷ ರೂಪಾಯಿಗಳನ್ನು ನೀಡುತ್ತಿದೆ" ಎಂದು ನಿತಿನ್ ಗಡ್ಕರಿ ಕೊರೊನಾ ಸಮಯದಲ್ಲಾದ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದ್ದಾರೆ.
ಗಡ್ಕರಿಯವರ ನಿಷ್ಪಕ್ಷಪಾತದ ಭಾಷಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು . ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಜನರು ಅವರ ಭಾಷಣಗಳನ್ನು ನೋಡಿದ್ದರು.