ಬೆಂಗಳೂರು, ಸ.17 (DaijiworldNews/HR): ಉದ್ಯಮಿ ಮಗನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮಾನಪ್ಪ ವಜ್ವಲ್ ಮಗ ಆಂಜನೇಯ ಮಾನಪ್ಪ ವಜ್ವಲ್ ವಿರುದ್ದ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಜಿ ಶಾಸಕ ಮಾನಪ್ಪ ವಜ್ವಲ್
ಉದ್ಯಮಿ ದೀಪಕ್ ರೈ ಮಗ ವಿಕ್ರಮ್ ರೈ ಮೇಲೆ ಮಾಜಿ ಆಂಜನೇಯ ಮಾನಪ್ಪ ವಜ್ವಲ್ ಕಾರು ಪಾರ್ಕಿಂಗ್ ವಿಚಾರಕ್ಕೆ ವಸಂತನಗರದ ಎಂಬಾಸಿ ಅಪಾರ್ಟ್ಮೆಂಟ್ ನಲ್ಲಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಇದೀಗ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ವಿಕ್ರಮ್ ರೈ ನೀಡಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಇನ್ನು ಕಾರು ಪಾರ್ಕಿಂಗ್ ವಿಚಾರಕ್ಕೆ ವಿಕ್ರಮ್ ರೈ ಮತ್ತು ಆಂಜನೇಯ ವಜ್ಜಲ್ ನಡುವೆ ಗಲಾಟೆ ನಡೆದಿದ್ದು,ದೆ, ಈ ಗಲಾಟೆಯಲ್ಲಿ ವಿಕ್ರಮ್ ರೈ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ.
ಈ ಪ್ರಕರಣ ಸಂಬಂಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಆಂಜನೇಯ ವಜ್ಜಲ್ ಮತ್ತು ವನೀಶ್ ವಜ್ಜಲ್ ದೂರು ದಾಖಲಿಸಿದ್ದಾರೆ.