ಮುಂಬೈ, ಸೆ.17 (DaijiworldNews/PY): ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಿರ್ಮಾಣ ಹಂತದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ 13 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ 4.40ರ ಸುಮಾರಿಗೆ ಬಿಕೆಸಿ ಮುಖ್ಯ ರಸ್ತೆ ಹಾಗೂ ಸಾಂತಾ ಕ್ರೂಜ್-ಚೆಂಬೂರ್ ರಸ್ತೆಯನ್ನು ಸಂಪರ್ಕಿಸುವ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಕುಸಿದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
"ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರೂ ಕೂಡಾ ಮೃತಪಟ್ಟಿಲ್ಲ. ಯಾವ ಕಾರ್ಮಿಕರೂ ಕೂಡಾ ಕಾಣೆಯಾಗಿಲ್ಲ" ಎಂದು ಡಿಸಿಪಿ ಮಂಜುನಾಥ್ ಸಿಂಗೆ ತಿಳಿಸಿದ್ದಾರೆ.