ನವದೆಹಲಿ, ಸ.16 (DaijiworldNews/HR): ಆಮ್ ಆದ್ಮಿ ಪಕ್ಷವು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಎಎಪಿ ನಾಯಕ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮನೀಶ್ ಸಿಸೋಡಿಯಾ, "ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್, ಬಾಕಿ ಇರುವ ವಿದ್ಯುತ್ ಬಿಲ್ ಮನ್ನಾ ಮತ್ತು 24x7 ವಿದ್ಯುತ್ ಪೂರೈಸಲಾಗುವುದು" ಎಂದರು.
ಇನ್ನು "ಉತ್ತರ ಪ್ರದೇಶದ ಪ್ರತಿ ಮನೆಗೂ 300 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ರೈತರು ಉಚಿತ ವಿದ್ಯುತ್ ಅನ್ನು ಪಡೆಯಬಹುದು" ಎಂದಿದ್ದಾರೆ.
ದೆಹಲಿಯಂತೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯಲು ಎಎಪಿಗೆ ಮತ ಚಲಾಯಿಸುವಂತೆ ಉತ್ತರ ಪ್ರದೇಶದ ಜನರಿಗೆ ಸಿಸೋಡಿಯಾ ಮನವಿ ಮಾಡಿದ್ದಾರೆ.