ನವದೆಹಲಿ, ಸ.16 (DaijiworldNews/HR): 1993ರ ಮುಂಬೈ ಬಾಂಬ್ ಸ್ಫೋಟ ಮಾದರಿಯಲ್ಲಿ ದಾಳಿಯನ್ನು ಪುನರಾವರ್ತಿಸಲು ಯೋಜಿಸುತ್ತಿದೆ ಮತ್ತು ಅದಕ್ಕಾಗಿ ಅನೇಕ ಸ್ಥಳಗಳನ್ನು ಗುರುತಿಸಿದೆ ಎಂದು ಮಾಹಿತಿಯನ್ನು ದೆಹಲಿ ಪೊಲೀಸರು ಕಲೆಹಾಕಿದ್ದಾರೆ.
ದೆಹಲಿ ಪೊಲೀಸರು ಮಂಗಳವಾರ ಬಂಧಿಸಲ್ಪಟ್ಟ ಆರು ಜನರನ್ನು ಪ್ರಶ್ನಿಸಿದಾಗ, ಅವರು 1993 ರ ಸ್ಫೋಟದ ಮಾದರಿಯಲ್ಲಿ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತರನ್ನು ಜಾನ್ ಮೊಹಮ್ಮದ್ ಶೇಖ್ (47) ಆಲಿಯಾಸ್ 'ಸಮೀರ್', ಒಸಾಮಾ (22), ಮೂಲಚಂದ್ (47), ಜೀಶಾನ್ ಖಮರ್ (28), ಮೊಹದ್ ಅಬು ಬಕರ್ (23) ಮತ್ತು ಮೊಹದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ.
ಬಂಧಿತ ಭಯೋತ್ಪಾದಕರಿಂದ ಪೊಲೀಸರು ಸುಮಾರು 1.5ಕೆಜಿ ಆರ್ ಡಿಎಕ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಬಂಧಿತ ಭಯೋತ್ಪಾದಕರು ಭಯೋತ್ಪಾದಕ ಮಾಡ್ಯೂಲ್ ಗೆ ಸಹಾಯ ಮಾಡಲು ಸ್ಲೀಪರ್ ಸೆಲ್ ಗಳಾಗಿ ಕೆಲಸ ಮಾಡುತ್ತಿರುವ ಕೆಲವು ಜನರನ್ನು ಹೆಸರಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಬಂಧಿಸುವ ನಿರೀಕ್ಷೆಯನ್ನು ಪೊಲೀಸರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.