ಗಾಂಧಿನಗರ, ಸ.16 (DaijiworldNews/HR): ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಮಂತ್ರ ಮಂಡಲ ರಚನೆಯಾಗಿದ್ದು, 24 ನೂತನ ಸಚಿವರು ಸಂಪುಟ ಸೇರಿದ್ದಾರೆ.
ವಿಧಾನಸಭೆ ಮಾಜಿ ಸ್ಪೀಕರ್ ರಾಜೇಂದ್ರ ತ್ರಿವೇದಿ ಮತ್ತು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಜಿತು ವಘಾನಿ ಸೇರಿದಂತೆ 24 ಸಚಿವರು ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ್ಯಪಾಲ ಆಚಾರ್ಯ ದೇವ್ ವ್ರತ್ ಅವರು ಸ್ವತಂತ್ರ ಉಸ್ತುವಾರಿ ಹೊಂದಿರುವ ಐದು ರಾಜ್ಯ ಸಚಿವರು ಸೇರಿದಂತೆ 10 ಕ್ಯಾಬಿನೆಟ್ ಸಚಿವರು ಮತ್ತು 14 ರಾಜ್ಯ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ಇನ್ನು ಸೋಮವಾರ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಅವರು ರಾಜಭವನ ಸಮಾರಂಭದಲ್ಲಿ ಹಾಜರಿದ್ದು, ವಿಜಯ್ ರೂಪನಿ ಅವರು ಶನಿವಾರ ರಾಜೀನಾಮೆ ನೀಡಿದ ನಂತರ ಹೊಸ ಸಚಿವಾಲಯ ರಚನೆಯಾಗಿದೆ.
ಕ್ಯಾಬಿನೆಟ್ ಮಂತ್ರಿಗಳಾಗಿ ರಾಜೇಂದ್ರ ತ್ರಿವೇದಿ, ಜಿತು ವಘಾನಿ, ರುಷಿಕೇಶ್ ಪಟೇಲ್, ಪೂರ್ಣೇಶ್ ಮೋದಿ, ರಾಘವ್ ಜಿ ಪಟೇಲ್, ಕಾನುಭಾಯಿ ದೇಸಾಯಿ, ಕಿರಿತ್ಸಿನ್ ರಾಣಾ, ನರೇಶ್ ಪಟೇಲ್, ಪ್ರದೀಪ ಪರ್ಮಾರ್ ಮತ್ತು ಅರ್ಜುನ್ ಸಿಂಗ್ ಚೌಹಾಣ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.