ಮುಂಬೈ, ಸೆ 16 (DaijiworldNews/MS): ನೀಲಿ ಸಿನಿಮಾ ನಿರ್ಮಾಣ ಪ್ರಕರಣದಡಿ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಫಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ವಿರುದ್ಧ 1500 ಪುಟಗಳ ಚಾರ್ಜ್ಶೀಟ್ನ್ನು ಮುಂಬೈ ಪೊಲೀಸರು ಇಂದು (ಸೆ.16) ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ನಟ ಶಿಲ್ಪಾ ಶೆಟ್ಟಿಯನ್ನು ವಿಚಾರಿಸಿದ್ದ ಮುಂಬೈ ಪೊಲೀಸರು, ಚಾರ್ಜ್ ಶೀಟ್ನಲ್ಲಿ ಶಿಲ್ಪಾ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಶಿಲ್ಪಾ ಶೆಟ್ಟಿ ತನ್ನ ಪತಿಯ ಚಟುವಟಿಕೆಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾರೆ.
"ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದೆ, ರಾಜ್ ಕುಂದ್ರಾ ಏನು ಮಾಡುತ್ತಿದ್ದಾಳೆಂದು ತಿಳಿದಿರಲಿಲ್ಲ" ಎಂದು ಮುಂಬೈ ಪೊಲೀಸರು ಸಲ್ಲಿಸಿದ 1,400 ಪುಟಗಳ ಚಾರ್ಜ್ ಶೀಟ್ನಲ್ಲಿ ನಟಿಯ ಹೇಳಿಕೆ ದಾಖಲಿಸಲಾಗಿದೆ.
ವಿವಾದಾತ್ಮಕ ನೀಲಿ ಚಿತ್ರದ ಆಪ್ ಗಳಾದ "ಹಾಟ್ ಶಾಟ್ಸ್" ಅಥವಾ "ಬಾಲಿಫೇಮ್", ಕುರಿತು ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಶಿಲ್ಪಾ ಶೆಟ್ಟಿ ಪೊಲೀಸರಿಗೆ ತಿಳಿಸಿದ್ದಾರೆ.
ಉದ್ಯಮಿ ರಾಜ್ ಕುಂದ್ರಾ,ಅಶ್ಲೀಲ ದಂಧೆಯ ದೈನಂದಿನ ಕಾರ್ಯಾಚರಣೆಗಳನ್ನು ನಡೆಸಲು ವಯಾನ್ ಇಂಡಸ್ಟ್ರೀಸ್ ಲಿಮಿಟೆಡ್ನ ಆವರಣವನ್ನು ಬಳಸಿದ್ದಾರೆ ಎಂದು ಚಾರ್ಜ್ ಶೀಟ್ ಉಲ್ಲೇಖವಿದೆ.