ಬೆಂಗಳೂರು, ಸ.16 (DaijiworldNews/HR): ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ರೈಲ್ವೆ ಇಲಾಖೆಯ ಪೊಲೀಸ್ ಎಡಿಜಿಪಿಯಾಗಿರುವಂತ ಭಾಸ್ಕರ್ ರಾವ್ ಅವರು ಸ್ವಯಂ ನಿವೃತ್ತಿಕೋರಿ ಅರ್ಜಿ ಸಲ್ಲಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು, ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಕೆಲಸ ಮಾಡಿದ್ದು, ಇದೀಗ ರೈಲ್ವೆ ಇಲಾಖೆಯ ಪೊಲೀಸ್ ಎಡಿಜಿಪಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.
ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ ಭಾಸ್ಕರ್ ರಾವ್ ಅವರು ಸ್ವಂಯ ನಿವೃತ್ತಿಕೋರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿ, ಐಜಿಪಿಗೆ ಪತ್ರದಲ್ಲಿ ಕೋರಿದ್ದು, ಇದು ಕುತೂಹಲಕ್ಕೂ ಕಾರಣವಾಗಿದೆ.