ಬೆಂಗಳೂರು, ಸೆ.16 (DaijiworldNews/PY): "ರಾಹುಲ್ ಅವರು ಒಮ್ಮೆ ಜನಿವಾರಧಾರಿ ಎನ್ನುತ್ತಾರೆ, ಮತ್ತೊಮ್ಮೆ ಕಾಶ್ಮೀರಿ ಪಂಡಿತ ಎನ್ನುತ್ತಾರೆ. ಕುಟುಂಬದ ಮೂಲಕ್ಕೂ ರಾಹುಲ್ ಗಾಂಧಿ ಹೇಳಿಕೆಗೂ ಯಾವುದೇ ಸಾಮ್ಯತೆಯಿಲ್ಲ" ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಚುನಾವಣೆಯ ಸಂದರ್ಭದಲ್ಲಿ ನಾನಾ ವೇಷ ಧರಿಸುವ ಟ್ವಿಟ್ಟರ್ ಟ್ರೋಲ್ ಖ್ಯಾತಿಯ ರಾಹುಲ್ ಗಾಂಧಿ ಅವರಿಗೆ ಈಗ ಧರ್ಮದ ನೆನಪಾಗಿದೆ. ರಾಹುಲ್ ಅವರು ಒಮ್ಮೆ ಜನಿವಾರಧಾರಿ ಎನ್ನುತ್ತಾರೆ, ಮತ್ತೊಮ್ಮೆ ಕಾಶ್ಮೀರಿ ಪಂಡಿತ ಎನ್ನುತ್ತಾರೆ. ಕುಟುಂಬದ ಮೂಲಕ್ಕೂ ರಾಹುಲ್ ಗಾಂಧಿ ಹೇಳಿಕೆಗೂ ಯಾವುದೇ ಸಾಮ್ಯತೆಯಿಲ್ಲ" ಎಂದಿದೆ.
"ದೇಶದ ಉದ್ಯಮ ರಂಗಕ್ಕೆ ಚೇತರಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಅನೇಕ ಉಪಕ್ರಮಗಳನ್ನು ಪ್ರಕಟಿಸಿದೆ" ಎಂದು ಹೇಳಿದೆ.
"ಡ್ರೋಣ್ ಉದ್ಯಮ, ಆಟೋಕಾಂಪೋನೆಂಟ್, ಆಟೋ ಉದ್ದಿಮೆಗಳಿಗೆ ಪ್ರೋತ್ಸಾಹ, ಟೆಲಿಕಾಂ ರಂಗದಲ್ಲಿ ಶೇ. 100 ರಷ್ಟು ಎಫ್ಡಿಐ, ಆಟೋಮೊಬೈಲ್ ಕ್ಷೇತ್ರದಲ್ಲಿ 7.5 ಲಕ್ಷ ಉದ್ಯೋಗ ಸೃಷ್ಟಿ" ಎಂದು ತಿಳಿಸಿದೆ.