ಮುಂಬೈ, ಸ.16 (DaijiworldNews/HR): ಮಿಸ್ಟರ್ ಇಂಡಿಯಾ ಸ್ಪರ್ಧೆಯ ಮಾಜಿ ವಿಜೇತ ಮನೋಜ್ ಪಾಟೀಲ್ ಕೆಲವು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಘಟನೆ ಮುಂಬೈಯ ಓಶಿವಾರದಲ್ಲಿ ನಡೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 16ರಂದು 12:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ಮನೋಜ್ ಪಾಟೀಲ್, ಕೆಲವು ದಿನಗಳ ಹಿಂದೆ, ನಟ ಸಾಹಿಲ್ ಖಾನ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಒತ್ತಾಯಿಸಿ ಓಶಿವಾರ ಪೊಲೀಸರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ, ಪಾಟೀಲ್ ಅವರು ನಟ ಮತ್ತು ಬಾಡಿಬಿಲ್ಡರ್ ಸಾಹಿಲ್ ಖಾನ್ ಅವರಿಂದ ಮಾನಹಾನಿಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಮನೋಜ್ ಪಾಟೀಲ್ ನ ಮ್ಯಾನೇಜರ್ ಪರಿ ನಾಜ್, "ಸಾಹಿಲ್ ಖಾನ್ ನಿಂದ ಕಿರುಕುಳಕ್ಕೊಳಗಾದ ನಂತರ ಮನೋಜ್ ತೀವ್ರ ಕ್ರಮ ಕೈಗೊಂಡಿದ್ದಾನೆ ಎಂದು ಹೇಳಿದ್ದು, ಒಂದು ವರ್ಷದಿಂದ ಅವನಿಗೆ ಕಿರುಕುಳ ನೀಡಲಾಗುತ್ತಿದೆ. ಅವರ ಫೋನ್ ಸಂಖ್ಯೆಯನ್ನು ವೈರಲ್ ಮಾಡಲಾಗಿತ್ತು. ಮತ್ತು ಕಳೆದ ರಾತ್ರಿ ಅವನು ತನ್ನ ಸ್ನೇಹಿತರೊಂದಿಗೆ ಇದ್ದನು ಮತ್ತು ಮನೆಗೆ ಹೋಗುವಾಗ ಅವನು ಮೆಡಿಕಲ್ ಶಾಪ್ ಗೆ ತೆರಳಿ ಮಾತ್ರೆಗಳನ್ನು ಖರೀದಿಸಿದನು. ಅವನು ಏನು ತೆಗೆದುಕೊಂಡನೆಂದು ಅವನ ಸ್ನೇಹಿತರಿಗೆ ತಿಳಿದಿರಲಿಲ್ಲ ಆದರೆ ಅವನು ಮನೆಗೆ ತಲುಪಿದಾಗ ಅವನು ಊಟವನ್ನೂ ಮಾಡಲಿಲ್ಲ ಮತ್ತು ಪ್ರಜ್ಞಾಹೀನನಾಗಿ ಬಿದ್ದಿದ್ದನು. ನಂತರ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ದೆವು ಎಂದು ಹೇಳಿದ್ದಾರೆ.