ಬೆಂಗಳೂರು, ಸೆ.16 (DaijiworldNews/PY): "ಕರೋನಾ ತಗ್ಗಿದ ಸಮಯದಲ್ಲಿಯೇ ವೆಂಟಿಲೇಟರ್ ಕೊರತೆ ಇದೆ ಎಂದರೆ ಕರೋನಾ ಸಮಯದಲ್ಲಿನ ಕೊರತೆಯಿಂದಾದ ಸಾವು, ನೋವು ಎಸ್ಟಿರಬಹುದು? ವೆಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯದ ವೈದ್ಯಕೀಯ ಕ್ಷೇತ್ರದ ದುರಾವಸ್ಥೆಯನ್ನ ಬಿಜೆಪಿ ಶಾಸಕರೇ ಆರೋಗ್ಯ ಸಚಿವರಿಗೆ ತರಾಟೆ ತೆಗೆದುಕೊಳ್ಳುವ ಮೂಲಕ ತೆರೆದಿಟ್ಟಿದ್ದಾರೆ ಸುಧಾಕರ್ ಅವರೇ, ಕರೋನಾ ತಗ್ಗಿದ ಸಮಯದಲ್ಲಿಯೇ ವೆಂಟಿಲೇಟರ್ ಕೊರತೆ ಇದೆ ಎಂದರೆ ಕರೋನಾ ಸಮಯದಲ್ಲಿನ ಕೊರತೆಯಿಂದಾದ ಸಾವು, ನೋವು ಎಸ್ಟಿರಬಹುದು? ವೆಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು?" ಎಂದು ಕೇಳಿದೆ.
"ಪ್ರತಿನಿತ್ಯ ನರೇಂದ್ರ ಮೋದಿ ಅವರ ಮುಖಸ್ತುತಿಯಲ್ಲಿ ತೊಡಗುವ ಬಿಜೆಪಿಗರು ಕೇಂದ್ರದ ವಿಷಯ ನಮ್ಮನ್ನೇಕೆ ಕೇಳುತ್ತಿದ್ದೀರಿ ಎನ್ನುವ ಮೂಲಕ ಸದನದಲ್ಲಿ ಬೆಲೆ ಏರಿಕೆಯ ಚರ್ಚೆಯಿಂದ ಪಲಾಯನ ಮಾಡಲು ಯತ್ನಿಸುತ್ತಿದೆ" ಎಂದಿದೆ.
"ಮೋದಿ ಮುಖ ತೋರಿಸಿ ಮತ ಪಡೆದ ಬಿಜೆಪಿ ಮೋದಿಯವರು ನಿರ್ಮಿಸಿದ ಅನಾಹುತಗಳಿಗೆ ಉತ್ತರಿಸಲಾಗದೆ ಜಾರಿಕೊಳ್ಳುವುದು ಹಾಸ್ಯಾಸ್ಪದ!" ಎಂದು ವ್ಯಂಗ್ಯವಾಡಿದೆ.