ಗುವಾಹಟಿ, ಸ.16 (DaijiworldNews/HR): ಡಿಸೆಂಬರ್ 26, 2016 ರಂದು ನನ್ನ ತಂದೆಯನ್ನು 11 ದುಷ್ಕರ್ಮಿಗಳು ಕ್ರೂರವಾಗಿ ಕೊಂದಿದ್ದು, ತನಗೆ ನ್ಯಾಯ ಬೇಕೆಂದು ಬಾಲಕನೊಬ್ಬ ಟ್ವಿಟರ್ ಮೂಲಕ ಮನವಿ ಮಾಡಿದ ವಿಡೀಯೋ ವೈರಲ್ ಆಗಿದೆ.
ಈ ಕುರಿತು ಟ್ವಿಟರ್ ನಲ್ಲಿ ವಿಡಿಯೋವನ್ನು ಹಾಕಿರುವ ಬಾಲಕ, "ನನ್ನ ಹೆಸರು ರಿಜ್ವಾನ್ ಸಾಹಿದ್ ಲಸ್ಕರ್. ಪ್ರಿಯ ಸರ್, ನಾನು 3 ತಿಂಗಳ ಮಗುವಾಗಿದ್ದಾಗ, ಡಿಸೆಂಬರ್ 26, 2016 ರಂದು ನನ್ನ ತಂದೆಯನ್ನು 11 ದುಷ್ಕರ್ಮಿಗಳು ಕ್ರೂರವಾಗಿ ಕೊಂದಿದ್ದು, ನನಗೆ ನ್ಯಾಯ ಬೇಕು ಎಂದಿದ್ದಾನೆ.
ಡಿಸೆಂಬರ್ 26, 2016 ರಂದು ಅಸ್ಸಾಂನ ಕಚಾರ್ ಜಿಲ್ಲೆಯ ಸೋನೈ ರಸ್ತೆ ಪ್ರದೇಶದಲ್ಲಿ ತನ್ನ ತಂದೆಯನ್ನು ದುಷ್ಕರ್ಮಿಗಳಿಂದ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಅಸ್ಸಾಂನ ಸಿಲ್ಚಾರ್ ನ 4 ವರ್ಷದ ಹುಡುಗ ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿದ್ದಾನೆ.
ಇನ್ನು ತನ್ನ ತಂದೆ ಸಹಿದ್ ಅಲೋಮ್ ಲಾಸ್ಕರ್ ನನ್ನು ಸಿಲ್ಚಾರ್ ನಲ್ಲಿ ಬರ್ಬರವಾಗಿ ಕೊಂದ ಶಂಕಿತ 11 ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಅವರನ್ನು ಟ್ವಿಟರ್ ನಲ್ಲಿ ವಿಡಿಯೋ ವೊಂದರಲ್ಲಿ ಕೋರಿದ್ದಾರೆ.