ಮುಂಬೈ, ಸೆ.16 (DaijiworldNews/PY): ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಮುಂಬೈನ ಕ್ರೈಂ-ಬ್ರ್ಯಾಂಚ್-ಸಿಐಡಿ, ಕಳೆದ ಕೆಲವು ತಿಂಗಳುಗಳಿಂದ ತನಿಖಡ ನಡೆಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1,500 ಪುಟಗಳ ಮೊದಲ ಪೂರಕ ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ.
ರಾಜ್ ಕುಂದ್ರಾ ಹಾಗೂ ಆತನ ಸಹಚರ ರಯಾನ್ ಜಾನ್ ಥರ್ಪೆಯನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದ್ದು, ಸದ್ಯ ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣದ ಸಂಬಂಧ ಭಾನುಸೂರ್ಯ ಠಾಕೂರ್ (26), ಮೋನು ಜೋಶಿ (28), ಗೆಹ್ನಾ ವಶಿಷ್ಠ್ (32), ಉಮೇಶ್ ಕಾಮತ್ (39), ಯಾಸ್ಮಿನ್ ಖಾನ್ (40), ಅತಿಫ್ ಅಹಮದ್ (24), ಪ್ರತಿಭಾ ನಲವಡೆ (33), ತನ್ವೀರ್ ಹಶ್ಮಿ (40) ಹಾಗೂ ದೀಪಂಕರ್ ಖಾಸ್ನವೀಸ್ (38) ಅವರನ್ನು ಬಂಧಿಸಲಾಗಿದೆ. ಅವರ ವಿರುದ್ದ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ.