ಉತ್ತರ ಕನ್ನಡ, ಸ.16 (DaijiworldNews/HR): ಕುಮಟಾದ ವನ್ನಳ್ಳಿರಲ್ಲಿರುವ ಸಮುದ್ರದ ದಡದ ಬಂಡೆ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೋಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಶಿರಸಿ ನಗರದ ನಿವಾಸಿ ಸುಬ್ಬುಗೌಡ(42) ಎಂದು ಗುರುತಿಸಲಾಗಿದೆ.
ಸ್ನೇಹಿತರ ಜೊತೆಗೆ ಪ್ರವಾಸಿಗರ ಜೊತೆಗೆ ಬಂದಿದ್ದ ಸುಬ್ಬುಗೌಡ, ಕಡಲತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದ ಈ ವೇಳೆ ಅಪ್ಪಳಿಸಿದ ಬೃಹತ್ ಗಾತ್ರದ ಅಲೆಯಿಂದ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.