ಬೆಂಗಳೂರು, ಸೆ.15 (DaijiworldNews/PY): "ಬಿಜೆಪಿಗರದ್ದು ಡೋಂಗಿ ಹಿಂದುತ್ವ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಗರು ಹಿಂದುತ್ವ ಎಂದು ಹೇಳುತ್ತಾ, ರಾಮ ನಾಮ ಜಪ ಮಾಡುತ್ತಾ, ಇತ್ತ ದೇವಾಲಯಗಳನ್ನು ಕೆಡವುತ್ತಿದ್ದಾರೆ. ದೇವಾಲಯಗಳನ್ನು ಮುಖ್ಯ ಕಾರ್ಯದರ್ಶಿಯ ಪತ್ರದ ಮೇಲೆ ಒಡೆದು ಹಾಕಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚಿಸದೇ ದೇವಾಲಯಯನ್ನು ಏಕೆ ಒಡೆದುಹಾಕಿದ್ದು?" ಎಂದು ಕೇಳಿದ್ದಾರೆ.
"ಬಿಜೆಪಿ ನಾಯಕರು ಹೇಳುವುದು ಹಿಂದುತ್ವ, ಆದರೆ ಇವರದೇ ಸರ್ಕಾರ ಹಿಂದು ದೇವಾಲಯಗಳನ್ನು ಒಡೆದು ಹಾಕುತ್ತಿದ್ದಾರೆ. ಸುಪ್ರಿಂ ಕೋರ್ಟ್ ಆದೇಶವಿದ್ದರೆ ಜನರೊಂದಿಗೆ ಭಕ್ತರೊಂದಿಗೆ ಮಾತನಾಡಬೇಕಿತ್ತು. ಈ ಬಗ್ಗೆ ಪರ್ಯಾಯವಾಗಿ ಏನು ಮಾಡಬೇಕು ಎಂದು ಜನಾಭಿಪ್ರಾಯ ಕೇಳಬೇಕಿತ್ತು. ಆದರೆ, ಆ ರೀತಿ ಮಾಡದೇ ಏಕಾಏಕಿ ದೇವಾಲಯಳನ್ನು ತೆರವು ಮಾಡಿರುವುದು ಬಿಜೆಪಿಗರ ಡೋಂಗಿ ಹಿಂದುತ್ವ ರಾಜಕಾರಣಕ್ಕೆ ಸಾಕ್ಷಿಯಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಹಿಂದುತ್ವದಾದ ಹೇಳುವುದು ಕೇವಲ ವೋಟಿಗಾಗಿ, ರಾಜಕಾರಣಕ್ಕಾಗಿ ಹೊರತು ಬಿಜೆಪಿಯವರಿಗೆ ಹಿಂದುತ್ವದ ಬಗ್ಗೆಯಾಗಲಿ, ದೇವರು, ದೇವಾಲಯದ ಕುರಿತಾಗಲಿ ಯಾವುದೇ ಗೌರವವಿಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ. ರಾಜ್ಯದ ಜನತೆ ಇದರನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ" ಎಂದಿದ್ದಾರೆ.