ನವದೆಹಲಿ, ಸೆ.15 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾತರು ಶೇ.100ರಷ್ಟು ಸುರಕ್ಷಿತವಾಗಿದ್ದಾರೆ" ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಇಕ್ಬಾಲ್ ಸಿಂಗ್ ಲಾಲ್ಪುರ ಹೇಳಿದ್ದಾರೆ.
ವಿರೋಧ ಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾಕರು ಶೇ.100ರಷ್ಟು ಸುರಕ್ಷಿತವಾಗಿದ್ದಾರೆ. ಅಲ್ಪಸಂಖ್ಯಾಕರ ಮೇಲಿನ ದೌರ್ಜನ್ಯ ಹೆಚ್ಚಾಗಿವೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದುದು" ಎಂದು ಎಂದಿದ್ದಾರೆ.
"ಕೊಲೆ, ಥಳಿತ ಹಾಗೂ ಗಲಭೆಯಂತಹ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಇಳಿಕೆ ಕಂಡಿದೆ. ಈ ಹಿಂದೆ ಏನು ನಡೆದಿತ್ತು ಎನ್ನುವ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಿ. ಬಿಜೆಪಿ ಪಕ್ಷ ಅಲಿಗಢ್ ಗಲಭೆ ನಡೆದ ವೇಳೆ ಅಧಿಕಾರದಲ್ಲಿ ಇರಲಿಲ್ಲ" ಎಂದು ಹೇಳಿದ್ದಾರೆ.
"ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಕೂಡಾ ಗಲಭೆಗಳು ನಡೆಯುತ್ತಿವೆ ಎನ್ನುವ ಬಗ್ಗೆ ಕೇಳಿದ್ದೇವೆ. ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಸುಲಿಗೆ, ಕೊಲೆ ಹಾಗೂ ಗಲಭೆಯಂತಹ ಪ್ರಕರಣಗಳು ಕಡಿಮೆಯಾಗಿವೆ" ಎಂದಿದ್ದಾರೆ.