ನವದೆಹಲಿ, ಸೆ.15 (DaijiworldNews/PY): "ಫಲಪ್ರದ ಅಭಿವೃದ್ಧಿಗೆ ಕೊರೊನಾ ಸೋಂಕು ಪಾಲುದಾರ ರಾಷ್ಟ್ರಗಳೊಂದಿಗೆ ಕೈಜೋಡಿಸುವ ಮಹತ್ವವನ್ನು ಎತ್ತಿ ತೋರಿಸಿದೆ" ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಅವರು ಎಫ್ಐಸಿಸಿಐ ಆಯೋಜಿಸಿದ್ದ ಭವಿಷ್ಯದ ಭಾರತ ಕುರಿತ ಕಾರ್ಯಾಗಾರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
"ಕೊರೊನಾ ಸಾಂಕ್ರಾಮಿಕ ರೋಗವು ನಾವು ನಮ್ಮ ಭವಿಷ್ಯವನ್ನು ಮರು ರೂಪಿಸಿಕೊಳ್ಳುವ ಹಾಗೂ ನಮ್ಮ ಪ್ರಯತ್ನಗಳನ್ನು ಪುನರ್ರಚಿಸಬೇಕು ಎನ್ನುವ ಬಗ್ಗೆ ಅರಿವು ಮಾಡಿ ಕೊಟ್ಟಿದೆ. ಶ್ರೇಷ್ಠತೆ ಸೇರಿದಂತೆ ನಾಯಕತ್ವ, ಹೊಂದಾಣಿಕೆ, ವೈವಿಧ್ಯತೆ ಹಾಗೂ ಸುಸ್ಥಿರತೆ ಕ್ಷೇತ್ರಗಳಲ್ಲಿ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಿಕೊಂಡಿದೆ" ಎಂದಿದ್ದಾರೆ.
"ಸ್ವಚ್ಛ ಪರಿಸರ, ಆರೋಗ್ಯಕರ ದೇಹ, ಅಂತರ್ಗತ ಸಮಾಜ ಹೊಂದುವ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರುತ್ತದೆ. ನಾವು ನಮ್ಮ ಪಾಲುದಾರರೊಂದಿಗೆ ಫಲಪ್ರದ ಅಭಿವೃದ್ದಿಗಾಗಿ ತೊಡಗಿಸಿಕೊಳ್ಳುವುದು ಅಗತ್ಯ" ಎಂದು ತಿಳಿಸಿದ್ದಾರೆ.